×
Ad

ಅತ್ಯಾಚಾರ ಪ್ರಕರಣ ಆರೋಪಿಗೆ ಜಾಮೀನು ನೀಡಿದ ನ್ಯಾಯಾಧೀಶ ಅಮಾನತು

Update: 2017-04-29 13:31 IST

 ಲಕ್ನೊ, ಎ. 29: ಅತ್ಯಾಚಾರ ಆರೋಪಿ ಸಮಾಜವಾದಿ ಪಾರ್ಟಿ ನಾಯಕ ಗಾಯತ್ರಿ ಪ್ರಜಾಪತಿಗೆ ಜಾಮೀನು ನೀಡಿದ ಸೆಶನ್ಸ್ ನ್ಯಾಯಾಧೀಶರನ್ನು ಅಮಾನತುಗೊಳಿಸಲಾಗಿದೆ. ಅಲಾಹಾಬಾದ್ ಹೈಕೋರ್ಟಿನ ಆಡಳಿತಸಮಿತಿ ನ್ಯಾಯಾಧೀಶರನ್ನು ಅಮಾನತುಗೊಳಿಸುವಂತೆ ನಿರ್ಧರಿಸಿತ್ತು. ಜಾಮೀನು ನೀಡಿದ ನ್ಯಾಯಾಧೀಶರವಿರುದ್ಧ ಇಲಾಖಾ ತನಿಖೆ ನಡೆಯಲಿದೆ.

ಅಲಾಹಾಬಾದ್ ಹೈಕೋರ್ಟಿನ ಲಕ್ನೊ ಪೀಠ ಉತ್ತರಪ್ರದೇಶದ ಮಾಜಿ ಸಚಿವ ಪ್ರಜಾಪತಿಗೆ ಪೊಕ್ಸೊ ಕೋರ್ಟು ನೀಡಿದ ಜಾಮೀನು ರದ್ದುಗೊಳಿಸಿದೆ. ಜಾಮೀನು ನೀಡಿದ್ದರ ವಿರುದ್ಧ ಯೋಗಿ ಆದಿತ್ಯನಾಥ್‌ರ ಸರಕಾರ ಹೈಕೋರ್ಟಿನಲ್ಲಿ ಅರ್ಜಿಸಲ್ಲಿತ್ತು.

ಸುಪ್ರೀಂಕೋರ್ಟಿನ ನಿರ್ದೇಶನ ಪ್ರಕಾರ ಮಾರ್ಚ್ 15ಕ್ಕೆ ಪ್ರಜಾಪತಿಯನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನ ಅವರಿಗೆ ವಿಧಿಸಲಾಗಿತ್ತು. ತನ್ನವಿರುದ್ಧ ಇದ್ದ ಆರೋಪವನ್ನು ಪ್ರಜಾಪತಿ ನಿರಾಕರಿಸಿದ್ದು, ರಾಜಕೀಯ ಪ್ರೇರಿತ ಪ್ರಕರಣ ಇದೆಂದು ಹೇಳಿದ್ದರು.

  49ವರ್ಷವಯಸ್ಸಿನ ಸಚಿವ ಮತ್ತು ಆರುಮಂದಿ ಸಹ ಆರೋಪಿಗಳು ಸೇರಿ ಮಹಿಳೆಯ ಅತ್ಯಾಚಾರ ಮಾಡಿದ್ದಲ್ಲದೆ, ಇದೇ ಮಹಿಳೆಯ ಅಪ್ರಾಪ್ತ ಪುತ್ರಿಯ ಅತ್ಯಾಚಾರಕ್ಕೂ ಯತ್ನಿಸಿದ್ದಾರೆ ಎಂದು ಇವರ ವಿರುದ್ಧ ಪ್ರಕರಣ ದಾಖಲುಗೊಂಡಿದೆ. ತಾನು ಸತತ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿದ್ದುದಲ್ಲದೆ, ತನ್ನ ಮಗಳನ್ನು ಕೂಡಾ ಇವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು 2016 ಅಕ್ಟೋಬರ್‌ನಲ್ಲಿ ಡಿಜಿಪಿಗೆ ದೂರು ನೀಡಿದ್ದರು. ಫೆಬ್ರವರಿ 17ಕ್ಕೆ ಪ್ರಜಾಪತಿ ವಿರುದ್ಧ ಕೇಸು ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News