ಅಗ್ಗದ ಜನರಿಕ್ ಔಷಧಕ್ಕೆ ವೈದ್ಯರೇ ಅಡ್ಡಿ: ಕಂಪೆನಿಗಳು
ಪಾಲಕ್ಕಾಡ್, ಎ. 29: ಕಡಿಮೆ ಬೆಲೆಗೆ ದೊರಕುವ ಜನರಿಕ್ ಔಷಧ ಎಲ್ಲೆಡೆ ಸಿಗುದಂತೆ ವೈದ್ಯರು, ಮತ್ತು ಔಷಧ ಕಂಪೆನಿಗಳು ಕೇಂದ್ರಸರಕಾರಕ್ಕೆ ಅಡ್ಡಿಯಾಗಿವೆ. ಔಷಧದ ಬ್ರಾಂಡ್ ಮಾತ್ರ ಬರೆಯುವ ಹೆಚ್ಚಿನ ವೈದ್ಯರು ಜನಿರಿಕ್ ಔಷಧದ ವಿರೋಧವಾಗಿದ್ದಾರೆ ಎನ್ನಲಾಗಿದೆ. ವೈದ್ಯರು ಚೀಟಿಯಲ್ಲಿ ಜನರಿಕ್ ಔಷಧದ ಹೆಸರು ಬರೆದುಕೊಡಬೇಕೆಂದು ಎರಡು ವರ್ಷ ಹಿಂದೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯ ನಿಷ್ಕರ್ಷಿಸಿತ್ತು. ಆದರೆ ವೈದ್ಯರು ಕೌನ್ಸಿಲ್‌ನ ಸೂಚನೆಗಳನ್ನು ಗಾಳಿಗೆ ತೂರಿದ್ದಾರೆ.
ಜನರಿಕ್ ಔಷಧ ವ್ಯಾಪನಗೊಳಿಸುವ ಕೇಂದ್ರಸರಕಾರದ ಕ್ರಮವನ್ನು ಐಎಂಎ(Indian Medical Association) ಸ್ವಾಗತಿಸಿದ್ದರೂ. ವೈದ್ಯರಲ್ಲಿ ದೊಡ್ಡದಾದ ಒಂದು ವಿಭಾಗ ಇದನ್ನು ಬೆಂಬಲಿಸಿಲ್ಲ. ಚಿಕಿತ್ಸೆ ಖರ್ಚು ಹೆಚ್ಚಲು ವೈದ್ಯರು ಬ್ರಾಂಡೆಡ್ ಔಷಧಗಳನ್ನೇ ಬರೆದು ಕೊಡುವುದು ಕಾರಣವಾಗಿದೆ. ಪೇಟೆಂಟೆಡ್ ಮದ್ದುಗಳ ಬೆಲೆಯನ್ನು ಸಾಮಾನ್ಯರಿಗೆ ತಾಳಿಕೊಳ್ಳಲು ಸಾಧ್ಯವಿಲ್ಲ. ಬ್ರಾಂಡೆಡ್ ಔಷಧಗಳಿಗೆ ಮಲ್ಟಿನ್ಯಾಶನಲ್ ಕಂಪೆನಿಗಳುಮತ್ತು ಬೃಹತ್ ಇಂಡಿಯನ್ ಕಂಪೆನಿಗಳು ಹೆಚ್ಚು ದರ ನಿಗದಿಪಡಿಸುತ್ತವೆ. ಬೇರೆಬೇರೆ ರೀತಿ ಬೆಲೆನಿಗದಿಪಡಿಸುವ ಕಂಪೆನಿಗಳೂ ಇವೆ.
ಜನರಿಕ್ ಮದ್ದುಗಳು ಎಲ್ಲೆಡೆ ಲಭಿಸುವಂತಾದರೆ ತಮ್ಮವ್ಯಾಪಾರ ಮುರಿದು ಬೀಳಬಹುದೆಂದು ಔಷಧ ಕಂಪೆನಿಗಳು ಹೆದರುತ್ತಿವೆ. ಜನರಿಕ್ ಮದ್ದು ಬರೆಯಲು ಪ್ರಾಯೋಗಿಕ ತೊಂದರೆಗಳಿವೆ ಎಂದು ವೈದ್ಯರು ಕೂಡಾ ಹೇಳುತ್ತಿದ್ದಾರೆ. ಎಲ್ಲ ಮದ್ದುಗಳ ಕೆಮಿಕಲ್ ಹೆಸರನ್ನು ತಕ್ಷಣ ನೆನಪುಮಾಡಿಕೊಳ್ಳಲು ಕಷ್ಟವೆಂದು ವೈದ್ಯರು ನೆಪ ವೊಡ್ಡುತ್ತಿದಾರೆ.ಪಿಕ್ಸೆಡ್ ಡೋಸ್ ಮದ್ದುಗಳ ಜನರಿಕ್ ಹೆಸರು ಬರೆಯುವುದು ಕಷ್ಟವಾಗುತ್ತಿದೆ. ಜೊತೆಗೆ ಜನರಿಕ್ ಔಷಧ ಗುಣಮಟ್ಟಕೂಡ ಸರಿಯಾಗಿಲ್ಲ ಎಂದು ವೈದ್ಯರು ಹೇಳುತ್ತಾರೆ.