12ವರ್ಷದ ಬಾಲೆ ಲಿಂಬೆರಸ ಮಾರಿ ಗಳಿಸಿದಳು ಕೋಟಿ ಕೋಟಿ ರೂಪಾಯಿ !

Update: 2017-04-29 14:53 GMT

ಹೊಸದಿಲ್ಲಿ,ಎ.29: ದೊಡ್ಡವರಿರಲಿ, ಸಣ್ಣವರಿರಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವ ಮಾತಿದೆ. ಇಂತಹ ಪರಿಶ್ರಮದಿಂದ ಹನ್ನೆರಡು ವರ್ಷದ ಹುಡುಗಿಯೊಬ್ಬಳು ಭಾರೀ ಸಾಧನೆಯನ್ನೇ ಮಾಡಿದ್ದಾಳೆ. ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸವಿರುವ 12ವರ್ಷದ ಪೋರಿ ಜಗತ್ತಿಗೇ ಮಾದರಿ ಯಾಗುವಂತಹ ಸಾಧನೆ ಮಾಡಿದ್ದಾಳೆ. ಅವಳು ಕೇವಲ ಲಿಂಬೆರಸ ಮಾರಿ 70 ಕೋಟಿ ರೂಪಾಯಿ ಹಣವನ್ನು ಸಂಪಾದಿಸಿದ್ದಾಳೆ. 2009ರಲ್ಲಿ ಹನ್ನರೆಡು ವರ್ಷದ ಮಿಕಾಯಿಲ್ ಉಲ್ಮೆರ್ ತನ್ನ ಲೆಮ್‌ನೆಡ್ ವ್ಯಾಪಾರ ಆರಂಭಿಸಿದಳು. ಅದನ್ನು ತಯಾರಿಸಲು ತನ್ನ ಮುತ್ತಜ್ಜಿಯ ವಿಧಾನವನ್ನು ಅನುಸರಿಸಿದಳು. ಅಜ್ಜಿ 1940ರಿಂದ ಈ ರೀತಿ ನಿಂಬೆರಸತಯಾರಿಸುತ್ತಿದ್ದರು ಎಂದು ಮಿಕಾಯಿಲ್ ಹೇಳುತ್ತಾಳೆ. ಈ ಲಿಂಬೆರಸದಲ್ಲಿ ಲಿಂಬೆ, ಜೇನು ಮತ್ತು ಅಗಸೆ ಬೀಜ ಬಳಸುತ್ತಿದ್ದಾಳೆ. ಮಿಕಾಯಿಲ್ ಪ್ರಪ್ರಥಮ ಒಂದು ಟಿವಿ ಶೋನಲ್ಲಿ ಲಿಂಬೆರಸವನ್ನು ಪರಿಚಿಯಿಸಿದಳು. ಈ ನಿಂಬೆ ರಸ ಜನರಿಗೆ ಹಿಡಿಸಿತು. ಇಷ್ಟವಾಯಿತು. ಮಿಕಾಯಿಲ್‌ಳ ಈ ಹೊಸ ಐಡಿಯಕ್ಕೆ 60ಸಾವಿರ ರೂಪಾಯಿ ಬಹುಮಾನ ಸಿಕ್ಕಿತು. ಈಗ ಮಿಕಾಯಿಲ್ ತನ್ನ ಲೆಮ್‌ನೆಡ್‌ನ್ನು ಮಾರಲು 55 ಹೋಲ್‌ಫುಡ್ ಸ್ಟೋರ್ಸ್ ನೊಂದಿಗೆ ವ್ಯವಹಾರ ಕುದುರಿಸಿದ್ದಾಳೆ. ಮಿಕಾಯಿಲ್ ಈವರೆಗೆ ಈ ಲೆಮನೆಡ್‌ ವ್ಯಾಪಾರದಿಂದ 1.10ಕೋಟಿ ಡಾಲರ್ (ಸುಮಾರು 70ಕೋಟಿರೂಪಾಯಿ) ಸಂಪಾದಿಸಿದ್ದಾಳೆ.

ಎರಡುವರ್ಷ ಮೊದಲು ಗೂಗಲ್ ಡೇರ್ ಟುಬಿ ಕಾರ್ಯಕ್ರಮದಲ್ಲಿ ಮಿಕಾಯಿಲ್ ಭಾಗವಹಿಸಿದ್ದಳು. ಈ ಕಾರ್ಯಕ್ರಮದಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಒಬಾಮ, ಮಿಕಾಯಿಲ್‌ರ ನಿಂಬೆ ರಸಕುಡಿದರು. ಮಾತ್ರವಲ್ಲ ಲಿಂಬೆ ನೀರು ಅವರಿಗೆ ತುಂಬ ಇಷ್ಟವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News