ಬ್ಯಾಂಕ್‌ನಿಂದ 3 ಕೋಟಿ ರೂ. ಕದ್ದ ಭಾರತೀಯನಿಗೆ 20 ತಿಂಗಳು ಜೈಲು

Update: 2017-04-29 15:04 GMT

ಹೂಸ್ಟನ್, ಎ. 29: ಬ್ಯಾಂಕ್‌ಗೆ ವಂಚಿಸಿ ಸುಮಾರು 4.84 ಲಕ್ಷ ಡಾಲರ್ (ಸುಮಾರು 3.11 ಕೋಟಿ ರೂಪಾಯಿ) ಕದ್ದ ಭಾರತೀಯ ಅಮೆರಿಕನ್ ವ್ಯಕ್ತಿಯೊಬ್ಬನಿಗೆ ಅಮೆರಿಕದ ನ್ಯಾಯಾಲಯವೊಂದು 20 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

45 ವರ್ಷದ ಕಿರಣ್ ಅಂದವರಪು ಫೆಬ್ರವರಿ 9ರಂದು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದನು ಹಾಗೂ ಗುರುವಾರ ನ್ಯಾಯಾಲಯವು ಆತನಿಗೆ ಶಿಕ್ಷೆ ವಿಧಿಸಿತು ಎಂದು ದಕ್ಷಿಣ ಟೆಕ್ಸಾಸ್ ಜಿಲ್ಲೆಯ ಅಟಾರ್ನಿ ಹೇಳಿಕೆಯೊಂದರಲ್ಲಿ ತಿಳಿಸಿದರು.

ಆತ ತಾನು ಕೆಲಸ ಮಾಡುತ್ತಿದ್ದ ‘ವೆದರ್‌ಫೋರ್ಡ್’ ಎಂಬ ಬ್ಯಾಂಕ್‌ನಲ್ಲಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಲಪಟಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆತನ ಜೈಲು ಶಿಕ್ಷೆ ಮುಗಿದ ಬಳಿಕ ಮೂರು ವರ್ಷಗಳ ಕಾಲ ಆತನ ಮೇಲೆ ನಿಗಾ ಇಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News