ಶಾಂತಿ ಮಾತ್ರ ಪವಿತ್ರ : ಈಜಿಪ್ಟ್ ಚರ್ಚ್‌ಗೆ ಭೇಟಿ ನೀಡಿದ ಪೋಪ್

Update: 2017-04-29 15:07 GMT

ಕೈರೋ (ಈಜಿಪ್ಟ್), ಎ. 29: ಈಜಿಪ್ಟ್‌ನಲ್ಲಿ ಇತ್ತೀಚೆಗೆ ದಾಳಿಗೊಳಗಾಗಿರುವ ಚರ್ಚ್‌ಗೆ ಶುಕ್ರವಾರ ಭೇಟಿ ನೀಡಿದ ಪೋಪ್ ಫ್ರಾನ್ಸಿಸ್ ಶಾಂತಿಗಾಗಿ ಕರೆ ನೀಡಿದ್ದಾರೆ.ಪೋಪ್ ಕೈರೋದಲ್ಲಿರುವ ಸೇಂಟ್ ಪೀಟರ್ ಮತ್ತು ಸೇಂಟ್ ಪೌಲ್ ಚರ್ಚ್‌ಗೆ ಮೆರವಣಿಗೆಯಲ್ಲಿ ಬಂದು ಭೇಟಿ ನೀಡಿದರು. ಅದಕ್ಕೂ ಮುನ್ನ ಈಜಿಪ್ಟ್‌ನ ಅಲ್ಪಸಂಖ್ಯಾತ ಕಾಪ್ಟಿಕ್ ಕ್ರೈಸ್ತ ಸಮುದಾಯದ ಪೋಪ್ ದ್ವಿತೀಯ ಟವಡ್ರೋಸ್‌ರನ್ನು ಅವರ ಕೇಂದ್ರ ಕಚೇರಿಯಲ್ಲಿ ಭೇಟಿಯಾದರು.

ಎಪ್ರಿಲ್ 9ರಂದು ಈಜಿಪ್ಟ್‌ನ ಎರಡು ಚರ್ಚ್‌ಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 45 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
‘‘ಶಾಂತಿ ಮಾತ್ರ ಪವಿತ್ರವಾದುದಾಗಿದೆ. ದೇವರ ಹೆಸರಿನಲ್ಲಿ ಯಾವುದೇ ರೀತಿಯ ಹಿಂಸಾ ಕೃತ್ಯವನ್ನು ನಡೆಸಲಾಗದು, ಯಾಕೆಂದರೆ ಅದು ದೇವರ ಹೆಸರನ್ನು ಕೆಡಿಸುತ್ತದೆ’’ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News