ಪಾಕ್ ರೈಲ್ವೆ ಯೋಜನೆಯ ಪೂರ್ಣ ವೆಚ್ಚ ಭರಿಸಲಿರುವ ಚೀನಾ

Update: 2017-04-29 16:23 GMT

ಇಸ್ಲಾಮಾಬಾದ್, ಎ. 29: ಪಾಕಿಸ್ತಾನದಲ್ಲಿ 8 ಬಿಲಿಯ ಡಾಲರ್ (ಸುಮಾರು 51,420 ಕೋಟಿ ರೂಪಾಯಿ) ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕರಾಚಿ-ಪೇಶಾವರ ರೈಲ್ವೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಚೀನಾ ಮುಂದಾಗಿದೆ. ಈ ಮೊದಲು, ಯೋಜನೆಯ ವೆಚ್ಚದ ಒಂದು ಭಾಗವನ್ನು ಎಡಿಬಿ ಭರಿಸುವುದೆಂದು ನಿರ್ಧರಿಸಲಾಗಿತ್ತು.

ಯೋಜನೆಯು ಸುಗಮವಾಗಿ ಮುಕ್ತಾಯಗೊಳ್ಳುವುದನ್ನು ಖಾತರಿಪಡಿಸಲು ಚೀನಾ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

‘‘ಎರಡು ಮೂಲಗಳಿಂದ ಬರುವ ಆರ್ಥಿಕ ನೆರವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ಅದರಿಂದ ಯೋಜನೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬುದಾಗಿ ಚೀನಾ ಬಲವಾಗಿ ಪ್ರತಿಪಾದಿಸಿತು’’ ಎಂದು ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News