ಸಹಾಯಕನನ್ನು ವಜಾಗೊಳಿಸಿದ ನವಾಝ್ ಶರೀಫ್

Update: 2017-04-29 17:45 GMT

ಇಸ್ಲಾಮಾಬಾದ್, ಎ. 29: ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ತನ್ನ ಸಹಾಯಕ ತಾರಿಖ್ ಫತೇಮಿ ಅವರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.

ಇದರ ಬೆನ್ನಿಗೇ ಸಂಭವಿಸಿದ ಅಸಹಜ ಬೆಳವಣಿಗೆಯೊಂದರಲ್ಲಿ, ಸೇನೆಯು ಪ್ರಧಾನಿಯ ನಿರ್ಧಾರವನ್ನು ತಿರಸ್ಕರಿಸಿದೆ.ವಿದೇಶ ವ್ಯವಹಾರಗಳ ವಿಶೇಷ ಸಹಾಯಕರಾಗಿದ್ದ ಫತೇಮಿ ಅವರನ್ನು ವಜಾಗೊಳಿಸುವಂತೆ ತನಿಖಾ ಸಮಿತಿಯೊಂದು ಮಾಡಿರುವ ಶಿಫಾರಸಿಗೆ ಶರೀಫ್ ಅನುಮೋದನೆ ನೀಡಿದ್ದಾರೆ.

ಉನ್ನತ ಮಟ್ಟದ ಭದ್ರತಾ ಸಭೆಯಲ್ಲಿ ಪಾಕಿಸ್ತಾನದ ನಾಗರಿಕ ಮತ್ತು ಸೇನಾ ನಾಯಕರ ನಡುವೆ ನಡೆದ ಮಾತಿನ ಚಕಮಕಿಯ ವಿವರಗಳನ್ನು ಫತೇಮಿ ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದನ್ನು ತನಿಖಾ ಸಮಿತಿ ಪತ್ತೆಹಚ್ಚಿತ್ತು.

ಈ ಸಂಬಂಧ ಪ್ರಧಾನಿ ಕಚೇರಿ ಆದೇಶ ಹೊರಡಿಸಿದ ಗಂಟೆಗಳ ಬಳಿಕ ಹೇಳಿಕೆಯೊಂದನ್ನು ಹೊರಡಿಸಿದ ಇಂಟರ್ ಸರ್ವಿಸಸ್ ಸಾರ್ವಜನಿಕ ಸಂಪರ್ಕ ಇಲಾಖೆ, ಈ ನಿರ್ಧಾರ ಪರಿಪೂರ್ಣವಾಗಿಲ್ಲ ಎಂಬುದಾಗಿ ಭಾವಿಸಿ ಸೇನೆಯು ಅಧಿಸೂಚನೆಯನ್ನು ತಿರಸ್ಕರಿಸಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News