ಅವಳಿ ಕೊಲೆ ಪ್ರಕರಣ: ಅಮೆರಿಕದಲ್ಲಿ ಭಾರತೀಯನ ಮರಣದಂಡನೆ ಖಾಯಂ

Update: 2017-04-30 07:56 GMT

ಹಾರಿಸ್‌ಬರ್ಗ್, ಎ. 30: 2012ರಲ್ಲಿ ಒಂದು ಹೆಣ್ಣುಮಗುಮತ್ತು ಅದರ ಮುತ್ತಜ್ಜಿಯನ್ನು ಕೊಲೆಗೈದ ಪ್ರಕರಣದಲ್ಲಿ ಭಾರತೀಯ ವ್ಯಕ್ತಿಗೆ ಅಮೆರಿಕದ ಕೆಳ ಕೋರ್ಟ್ ವಿಧಿಸಿದ್ದ ಮರಣದಂಡನೆಯನ್ನು ಹೈಕೋರ್ಟ ಖಾಯಂಗೊಳಿಸಿದೆ. ಆಂಧ್ರಪ್ರದೇಶದ ರಘುನಂದನ್ ಯಂಡಮೂರಿ(28) ಎನ್ನುವ ವ್ಯಕ್ತಿ ಹತ್ತುತಿಂಗಳ ಹೆಣ್ಣುಮಗು ಸಾನ್ವಿವೇನ್ನಾ ಮತ್ತುಅದರ ಅಜ್ಜಿ 61 ವರ್ಷದ ಸತ್ಯವತಿ ವೇನ್ನಾರನ್ನುಕೊಲೆಮಾಡಿದ್ದ. ಜೂಜಾಟಕ್ಕೆ ಹಣಕ್ಕಾಗಿ ಈತ ಮಗುವನ್ನು ಅಪಹರಿಸಲು ಯತ್ನಿಸುವವೇಳೆ ಮಗು ಮತ್ತು ಅದರ ಅಜ್ಜಿಯನ್ನು ಕೊಲೆಗೈದಿದ್ದಾನೆ ಎಂದು ಪ್ರಾಸಿಕ್ಯೂಟರ್ ವಾದಿಸಿದ್ದರು.

ಟೆಕ್ನಾಲಜಿ ಪ್ರೊಫೆಶನಲ್ ಆಗಿರುವ ರಘುನಂದನ್, ಫಿಲಾಡಲ್ಫಿಯದಲ್ಲಿ ಆತವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿಯೇ ಮಗುಮತ್ತು ಕುಟುಂಬ ವಾಸವಿತ್ತು. ಮಗುವಿನ ತಂದೆತಾಯಿಯರು ಟೆಕ್ನಾಲಜಿ ಪ್ರೊಫಶನಲ್ ಆಗಿದ್ದರು. ಈಕುಟುಂಬಕ್ಕೆ ನಿಕಟನಾಗಿದ್ದ ರಘು ಜೂಜಿನಲ್ಲಿ ಕಳಕೊಂಡ 50,000ಡಾಲರ್‌ಗಾಗಿ ಮಗುವನ್ನು ಅಪಹರಿಸಲು ಯೋಜನೆ ರೂಪಿಸಿದ್ದಾನೆ.

ಮಗುವಿನ ತಂದೆತಾಯಿ ಇಬ್ಬರೂ ಕೆಲಸದಲ್ಲಿರುವುದರಿಂದ ಹಣ ಸುಲಭದಲ್ಲಿ ಸಿಗಬಹುದು ಎಂದು ಮಗುವನ್ನು ಅಪಹರಿಸಲು ಯೋಚಿಸಿದ್ದಾನೆ. ಮಗು, ಮತ್ತು ಅಜ್ಜಿ ಮಾತ್ರ ಘಟನೆಸಮಯದಲ್ಲಿ ಅಪಾರ್ಟ್ ಮೆಂಟ್‌ನಲ್ಲಿದ್ದರು. ಮಗುವನ್ನು ರಕ್ಷಿಸಲು ಅಜ್ಜಿ ಪ್ರಯತ್ನಿಸಿದಾಗ ಅವರನ್ನು ರಘು ಚಾಕುವಿನಿಂದ ಮಾರಕವಾಗಿ ತಿವಿದಿದ್ದಾನೆ. ನಂತರ ಮಗು ಅತ್ತಾಗ ಕರವಸ್ತ್ರದಿಂದ ಮಗುವಿನ ಮುಖವನ್ನು ಮುಚ್ಚಿದ್ದ. ಮಗು ಮತ್ತು ಅಜ್ಜಿ ಇಬ್ಬರೂ ತೀರಿಹೋಗಿದ್ದರು. ಮಗುವಿನ ಮೃತದೇಹ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ಪತ್ತೆಯಾಗಿತುತ. ತನಗೆ ಕೊಲ್ಲುವ ಉದ್ದೇಶವಿರಲಿಲ್ಲ. ಸಾವು ಪ್ರಮಾದವಶಾತ್ ಆಗಿಬಿಟ್ಟಿದೆ ಎಂದು ಆರೋಪಿ ವಾದಿಸಿದ್ದ. ಸ್ವಯಂ ರಘುನಂದನ್ ತನ್ನ ಪರವಾದಿಸಿದ್ದ. ಸಾಕ್ಷ್ಯಗಳ ಆಧಾರದಲ್ಲಿ 2015ರಲ್ಲಿ ಕೆಳಕೋರ್ಟು ರಘುವಿಗೆ ಮರಣದಂಡನೆ ವಿಧಿಸಿತ್ತುತ. 1976ರ ಬಳಿಕ ಅಮೆರಿಕದಲ್ಲಿ ಭಾರತೀಯರಿಗೆ ಮರಣದಂಡನೆ ವಿಧಿಸಲಾದ ಪ್ರಥಮ ಪ್ರಕರಣ ಇದು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News