89ವರ್ಷ ವೃದ್ಧೆಯ ಅತ್ಯಾಚಾರ ಆರೋಪಿಗೆ 100ವರ್ಷ ಜೈಲು !

Update: 2017-04-30 11:19 GMT

ವಾಷಿಂಗ್ಟನ್,ಎ. 30: ಅಮೆರಿಕದ ಇಲಿನಾಯಿಯಲ್ಲಿ ಕೋವಿ ತೋರಿಸಿ 89ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿ, ನಂತರ ಕದ್ದು ಪರಾರಿಯಾದ 23ವರ್ಷದ ಯುವಕನಿಗೆ ಅಮೆರಿಕದ ಕೋರ್ಟು 100ವರ್ಷ ಜೈಲುವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿ ಶಿಕಾಗೊ ವಂಶದ ಟೆವಿನ್ ರೈನೆ ಎನ್ನುವ ಯುವಕನಿಗೆ ಡ್ಯೂಪೇಜ್ ಕೌಂಟಿ ಕೋರ್ಟು ನ್ಯಾಯಾಧೀಶ ಬ್ರಿಯಾನ ಟೈಲರ್ 100ವರ್ಷಜೈಲು ಶಿಕ್ಷೆ ವಿಧಿಸಿದ್ದಾರೆ.

 ಘಟನೆ 2015 ಜನವರಿ ಒಂದರಂದು ನಡೆದಿತ್ತು. ವೃದ್ಧೆಯ ಮನೆಗೆ ನುಗ್ಗಿದ ಟೆವಿನ್ ರೈನೆಕೋವಿಯ ಮೊನೆಯಲ್ಲಿ ನಿಲ್ಲಿಸಿ ವೃದ್ಧೆಯನ್ನು ಅತ್ಯಾಚಾರಗೈದಿದ್ದಾನೆ. ನಂತರ ಹಣವನ್ನು ತೆಗೆಯಲು ಎಟಿಎಂಗೆ ಕಾರನ್ನು ಚಲಾಯಿಸಿಕೊಂಡು ಹೋಗುವಂತೆ ರೈನೆ ವೃದ್ಧೆಯನ್ನು ಬಲವಂತಪಡಿಸಿದ್ದನು. ನಿಜವಾದ ಆರೋಪಿ ಯಾರು ಎಂದು ಗುರುತಿಸಲು ವೃದ್ಧೆ ಅಸಹಾಯಕರಾಗಿದ್ದಾರೆ.ಆದರೆ ರೈನೆವಿರುದ್ಧ ಎಲ್ಲ ಸಾಕ್ಷ್ಯಗಳು ಬಲವಾಗಿದ್ದುದರಿಂದ ಜಡ್ಜ್ ರೈನೆಗೆ ನೂರುವರ್ಷ ಜೈಲು ಶಿಕ್ಷೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News