36 ವರ್ಷಗಳಲ್ಲಿ ಮೊದಲ ಬಾರಿ ‘ಕೈಕೊಟ್ಟ’ ಅಧ್ಯಕ್ಷ

Update: 2017-04-30 13:39 GMT

ವಾಶಿಂಗ್ಟನ್, ಎ. 30: ಶ್ವೇತಭವನ ಏರ್ಪಡಿಸುವ ವಾರ್ಷಿಕ ‘ಕಪ್ಪು-ಟೈ’ ಔತಣಕೂಟಕ್ಕಾಗಿ ಶ್ವೇತಭವನದ ಸುದ್ದಿ ಮಾಡುವ ಪತ್ರಕರ್ತರು ಶನಿವಾರ ನೆರೆದಿದ್ದರು. ಆದರೆ, ಈ ಕೂಟಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೈರುಹಾಜರಾದ ಹಿನ್ನೆಲೆಯಲ್ಲಿ ಅಲ್ಲಿ ಕಳೆಯಿರಲಿಲ್ಲ. 36 ವರ್ಷಗಳಲ್ಲಿ ಪತ್ರಕರ್ತರ ವಾರ್ಷಿಕ ಕೂಟದಲ್ಲಿ ಕಾಣಿಸಿಕೊಳ್ಳದ ಮೊದಲ ಅಧ್ಯಕ್ಷರಾಗಿ ಟ್ರಂಪ್ ದಾಖಲಾದರು.

ಟ್ರಂಪ್ ತನ್ನ ಆಡಳಿತದ 100 ದಿನಗಳ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಇದೇ ದಿನ ಪೆನ್ಸಿಲ್ವೇನಿಯದಲ್ಲಿ ನಿಗದಿಪಡಿಸಿದ್ದರು.
ಟ್ರಂಪ್ ಆಡಳಿತದ ಹೆಚ್ಚಿನ ಅಧಿಕಾರಿಗಳೂ ಅಧ್ಯಕ್ಷರಿಗೆ ಬೆಂಬಲ ಸೂಚಿಸುವುದಕ್ಕಾಗಿ ಪತ್ರಕರ್ತರ ಕೂಟಕ್ಕೆ ಗೈರುಹಾಜರಾದರು.
ಪತ್ರಿಕೆಗಳು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿವೆ ಎಂಬುದಾಗಿ ಅಧ್ಯಕ್ಷರು ಪದೇ ಪದೇ ಆರೋಪಿಸುತ್ತಾ ಬಂದಿದ್ದಾರೆ.

ಪೆನ್ಸಿಲ್ವೇನಿಯದಲ್ಲಿ ತನ್ನ ಚುನಾವಣಾ ಪ್ರಚಾರ ಮಾದರಿಯ ಭಾಷಣದಲ್ಲಿ ಟ್ರಂಪ್ ಮತ್ತೊಮ್ಮೆ ಪತ್ರಕರ್ತರ ವಿರುದ್ಧ ಹರಿಹಾಯ್ದರು.
ವಾಶಿಂಗ್ಟನ್‌ನಲ್ಲಿ ಮಾತನಾಡಿದ ಶ್ವೇತಭವನ ವರದಿಗಾರರ ಕೂಟದ ಅಧ್ಯಕ್ಷ ಜೆಫ್ ಮ್ಯಾಸನ್ ಪತ್ರಿಕಾ ಸ್ವಾತಂತ್ರವನ್ನು ಸಮರ್ಥಿಸಿಕೊಂಡರು. ಮಾಧ್ಯಮಗಳನ್ನು ದುರ್ಬಲಗೊಳಿಸುವ ಪ್ರಯತ್ನ ಪ್ರಜಾಸತ್ತೆಗೆ ಮಾರಕ ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News