ಹಣ ಹಂಚುವ ಅಭ್ಯರ್ಥಿಯ ಅನರ್ಹಗೊಳಿಸಿ: ಕೇಂದ್ರಕ್ಕೆ ಸಲಹೆ ನೀಡಲು ಚುನಾವಣಾ ಆಯೋಗದ ನಿರ್ಧಾರ

Update: 2017-04-30 18:19 GMT

 ಹೊಸದಿಲ್ಲಿ, ಎ.30: ಆರೋಪ ಪಟ್ಟಿ ದಾಖಲಾಗಿರುವವರು ಅಥವಾ ಮತದಾರರಿಗೆ ಹಣ ಹಂಚುವ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀ ಲು ಚುನಾವಣಾ ಆಯೋಗ ನಿರ್ಧರಿಸಿದೆ.

ತಮಿಳುನಾಡಿನಲ್ಲಿ ಇತ್ತೀಚೆಗೆ ವಿಧಾನಸಭೆ ಉಪಚುನಾವಣೆ ಸಂದರ್ಭ ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿ ಬಂದ ಬಳಿಕ ಆಯೋಗವು ಆ ಕ್ಷೇತ್ರದ ಚುನಾವಣೆಯನ್ನೇ ರದ್ದುಗೊಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಆರೋಪ ಪಟ್ಟಿ ದಾಖಲಾಗಿರುವವರು ಐದು ವರ್ಷ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಕಾನೂನಿನಲ್ಲಿ ತಿಳಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರ ಅಥವಾ ಹಣದ ಬಲ ಬಳಸಿದ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ಸಂವಿಧಾನದ 324ನೇ ಪರಿಚ್ಛೇದದಡಿ ಅಧಿಕಾರ ನೀಡಲಾಗಿದೆ. ಆದರೆ ಕಾನೂನಿನ ಮೂಲಕ ಈ ಅಧಿಕಾರ ನೀಡಬೇಕು ಎಂಬುದು ಆಯೋಗದ ಇರಾದೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News