ಇಸ್ಲಾಮಿಕ್ ಕಾನೂನಿನಲ್ಲಿ ಮೂರು ತಲಾಖ್ ಗೆ ಅನುಮತಿಯಿಲ್ಲ: ವೆಂಕಯ್ಯ ನಾಯ್ಡು
ಹೈದರಾಬಾದ್, ಮೇ1: ಇಸ್ಲಾಮಿಕ್ ಕಾನೂನಿನಲ್ಲಿ ಮೂರು ತಲಾಖ್ ಗೆ ಅನುಮತಿಯಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ಮೂರು ತಲಾಖ್ ಗೆ ಧಾರ್ಮಿಕ ವಿಷಯವಲ್ಲ. ಇತರ ಮಹಿಳೆಯರಂತೆ ಮುಸ್ಲಿಮ್ ಮಹಿಳೆಯರೂ ಗೌರವಯುತವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ ಮೂರು ತಲಾಖ್ ಗೆ ಇದಕ್ಕೆ ವಿರುದ್ಧ ಸೃಷ್ಟಿಯಾದ ಸಮಸ್ಯೆಯಾಗಿದೆ.
ಇದುಕೊನೆಗೊಳ್ಳಬೇಕು ಮತ್ತು ಇದರಲ್ಲಿ ರಾಜಕೀಯ ಸಲ್ಲ ಎಂದು ವೆಂಕಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಮೂರು ತಲಾಖ್ ಗೆ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಇದು ಸರಿಯಲ್ಲ ಎಂದ ನಾಯ್ಡು, ಮುಸ್ಲಿಮರೇ ಇದರ ಕುರಿತು ಚಿಂತನೆ ನಡೆಸಬೇಕೆಂದು ಪ್ರಧಾನಿ ಆಗ್ರಹಿಸಿದ್ದಾರೆ ಎನ್ನುವ ಸ್ಪಷ್ಟೀಕರಣ ನೀಡಿದ್ದಾರೆ.
ಮೂರು ತಲಾಖ್ ಗೆ ವಿಷಯದಲ್ಲಿ ಕಾಂಗ್ರೆಸ್ಸಿಗರು ಯಾಕೆ ಮೌನವಹಿಸಿದ್ದಾರೆ. ಈ ಬಗ್ಗೆ ಅವರುಉತ್ತರ ನೀಡಬೇಕು. ಕಾಂಗ್ರೆಸ್ಸಿಗರು ಅಲ್ಪಸಂಖ್ಯಾತರಿಗಾಗಿ ಹೋರಾಡುವವರು ಎಂದು ಹೇಳಿಕೊಳ್ಳುತ್ತಾರೆ. ಅಲ್ಪಸಂಖ್ಯಾತ ವಿಭಾಗದ ಮಹಿಳೆಯರು ಕುರಿತು ಅವರಿಗೆ ಯಾವುದೇ ರೀತಿಯ ಅನುಕಂಪವಿಲ್ಲ ಎಂದು ಕಾಂಗ್ರೆಸ್ಸಿಗರನ್ನು ಕೆಣಕಿದ ನಾಯ್ಡು, ಮೂರು ತಲಾಖ್ ಗೆ ಧರ್ಮದ ಹೆಸರಿನಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಭೇದಭಾವವಾಗಿದೆ ಎಂದು ಹೇಳಿದ್ದಾರೆ.