×
Ad

ವಧುವಿಗೆ ಮದುವೆ ಉಡುಗೊರೆ ಬ್ಯಾಟು: ಇದು, ಗಂಡ ಮದ್ಯಪಾನ ಮಾಡಿದರೆ ಹೊಡೆಯಲಿಕ್ಕೆಂದ ಮಂತ್ರಿ!

Update: 2017-05-01 13:25 IST

ಭೋಪಾಲ್,ಮೇ1: ಸಾಮೂಹಿಕ ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಸಚಿವರು ಮದುವೆಯಾಗುತ್ತಿರುವ ಯುವತಿಯರಿಗೆ ಬ್ಯಾಟನ್ನು ಉಡುಗೊರೆ ನೀಡಿದ್ದಾರೆ. ಪತಿಯಂದಿರು ಮದ್ಯಪಾನ ಮಾಡಿ ಕಿರುಕುಳ ನೀಡಿದರೆ ಅವರನ್ನು ಇದರಿಂದ ಹೊಡೆಯಬೇಕೆಂದು ಉಚಿತ ಸಲಹೆಯನ್ನು ಸಚಿವರು ನೀಡಿದ್ದಾರೆ.

ಮಧ್ಯಪ್ರದೇಶ ಪಂಚಾಯತ್‌ರಾಜ್, ಗ್ರಾಮಾಭಿವೃದ್ಧಿಸಚಿವ ಗೋಪಾಲಭಾರ್ಗವ ಈ ಅಪರೂಪದ ಬ್ಯಾಟ್ ಉಡುಗೊರೆ ನೀಡಿದ ಮಹಾನುಭಾವರು. ಊರಿನ ಹೊರಗೆ ಬಟ್ಟೆತೊಳೆಯಲು ಬಳಸುವ ಕ್ರಿಕೆಟ್ ಬ್ಯಾಟ್‌ಗೆ ಹೋಲುವ ಮರದ ಮೊಗ್ರಿ ಎನ್ನುವ ಬ್ಯಾಟನ್ನು ಸಚಿವರು ವಧುಗಳಿಗೆ ಉಡುಗೊರೆನೀಡಿದರು. ಅಕ್ಷಯ ತೃತೀಯ ದಿನದಲ್ಲಿಮಧ್ಯಪ್ರದೇಶ ಸಾಗರ ಜಿಲ್ಲೆಯ ಗರ್ಹಾಕೋಟ್‌ನಲ್ಲಿ 700 ಮಂದಿ ಭಾಗವಹಿಸಿದ್ದ ಸಾಮೂಹಿಕ ವಿವಾಹಕಾರ್ಯಕ್ರಮದಲ್ಲಿ ಈ ಬ್ಯಾಟ್ ಉಡುಗೊರೆ ಸಚಿವರು ನೀಡಿ ಆಶೀರ್ವದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News