×
Ad

ಐವರು ಪೊಲೀಸರು, ಇಬ್ಬರು ಬ್ಯಾಂಕ್ ಸಿಬ್ಬಂದಿಗಳನ್ನು ಕೊಂದು 50 ಲಕ್ಷ ರೂ. ದೋಚಿದ ಉಗ್ರರು

Update: 2017-05-01 17:58 IST

ಶ್ರೀನಗರ, ಮೇ1: ದಕ್ಷಿಣ ಕಾಶ್ಮೀರದ ಕುಲ್ಗಾಂನಲ್ಲಿ  ಬ್ಯಾಂಕ್ ಗೆ ಹಣ ಕೊಂಡೊಯ್ಯುತ್ತಿದ್ದ ವ್ಯಾನ್ ಮೇಲೆ ದಾಳಿ ನಡೆಸಿದ   ಉಗ್ರರು ಐವರು  ಪೊಲೀಸರು ಮತ್ತು ಇಬ್ಬರು ಬ್ಯಾಂಕ್ ಸಿಬ್ಬಂದಿಗಳನ್ನು ಕೊಂದು 50 ಲಕ್ಷ ರೂ. ದೋಚಿದ ಘಟನೆ ಸೋಮವಾರ ನಡೆದಿದೆ.

ಸ್ಥಳೀಯ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಗೆ ಹಣ ಸಾಗಿಸುತ್ತಿದ್ದ ವ್ಯಾನ್ ಮೇಲೆ ದಾಳಿ ನಡೆಸಿದ ಉಗ್ರರು ವ್ಯಾನ್ ನಲ್ಲಿದ್ದ ಪೊಲೀಸರು ಮತ್ತು ಬ್ಯಾಂಕ್ ಸಿಬ್ಬಂದಿಗಳನ್ನು ಹೊರಗೆಳೆದು ಅವರನ್ನು ಕೊಂದು ಹಾಕಿದರು. ಬಳಿಕ ಪೊಲೀಸರ ಕೈಯಲ್ಲಿದ್ದ ಶಸ್ತ್ರಾಸ್ತ್ರ ಮತ್ತು ವ್ಯಾನ್ ನಲ್ಲಿದ್ದ  ಹಣವನ್ನು ಉಗ್ರರು ಎಗರಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪರಾರಿಯಾದ  ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News