×
Ad

ಕರ್ನಾಟಕದ ಕಮಲ ಕಲಹದ ವರದಿ ಸಲ್ಲಿಕೆ

Update: 2017-05-01 18:24 IST

ಹೊಸದಿಲ್ಲಿ, ಮೇ 1: ಕರ್ನಾಟಕದ ಬಿಜೆಪಿಯಲ್ಲಿ ಕಂಡು ಬಂದಿರುವ ಆಂತರಿಕ ಕಲಹದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಅವರಿಗೆ ಕರ್ನಾಟಕದ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಇಂದು ವರದಿ ಸಲ್ಲಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ  ಅವರನ್ನು ದಿಲ್ಲಿಯ  ನಿವಾಸದಲ್ಲಿ ಭೇಟಿಯಾದ  ಮುರಳೀಧರ್ ರಾವ್ ಅವರು ರಾಜ್ಯದ ಬಿಜೆಪಿಯ ಇತ್ತೀಚಿಗಿನ ಬೆಳವಣಿಗೆಯ ಬಗ್ಗೆ ವರದಿ ಸಲ್ಲಿಸಿದರು.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಆಯೋಜಿಸಿದ ಸಭೆ ಮತ್ತು ಬಿಜೆಪಿಯ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮುರಳೀಧರ್ ರಾವ್ ವರದಿಯಲ್ಲಿ ವಿವರಿಸಿದ್ದಾರೆಂದು ತಿಳಿದು ಬಂದಿದೆ. ಮುರಳೀಧರ ರಾವ್ ವರದಿಯಲ್ಲಿ ಪ್ರಸ್ತಾಪಿಸಿರುವ ಪ್ರಮುಖ ವಿಚಾರಗಳು ಇಂತಿವೆ

ಕೆ.ಎಸ್. ಈಶ್ವರಪ್ಪ ಅವರ ಚಟುವಟಿಕೆಯಿಂದ ಪಕ್ಷದ ಇಮೇಜ್ ಗೆ ಧಕ್ಕೆಯಾಗುತ್ತಿದೆ. ಈಶ್ವರಪ್ಪ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದಕ್ಕೆ ಕಡಿವಾಣ ಹಾಕಬೇಕು.ಅವರು ಯಾವುದೇ ಸಮಸ್ಯೆಯನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾರ್ಜೆ ಬಗ್ಗೆ ಮುರಳೀಧರ ರಾವ್ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪಕ್ಷದ ಸಮನ್ವಯ ಸಮಿತಿ ಸಭೆ ನಡೆಸದಂತೆ ಶೋಭಾ ಕರಂದ್ಲಾರ್ಜೆ ಅಡ್ಡಗಾಲು ಹಾಕುತ್ತಿದ್ದಾರೆ. ಬಿಎಸ್ ವೈ ಬೇರೆ ನಾಯಕರ ಮಾತನ್ನು ಕೇಳುತ್ತಿಲ್ಲ. ಶೋಭಾ ಹೇಳಿದಂತೆ ಕೇಳುತ್ತಾರೆ. ಶೋಭಾರನ್ನು ಬಿಎಸ್ ವೈ ದೂರ ಇಡುವುದು ಒಳಿತು. ಕೆಜೆಪಿಯಿಂದ ಬಂದವರಿಗೆ ಬಿಎಸ್ ವೈ ಹೆಚ್ಚಿನ ಮನ್ನಣೆ ನೀಡುತ್ತಿದ್ದಾರೆ. ವಾರದೊಳಗೆ ಸಭೆ ಕರೆದು ಎಚ್ಚರಿಕೆ ನೀಡುವಂತೆ ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News