ಆರ್‌ಸಿಬಿಗೆ ಎಂಟನೆ ಸೋಲು
ಮುಂಬೈ, ಮೇ 1: ಇಲ್ಲಿ ನಡೆದ ಐಪಿಎಲ್‌ನ ಟ್ವೆಂಟಿ-20 ಟೂರ್ನಿಯ 38ನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ಐದು ವಿಕೆಟ್‌ಗಳ ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಮುಂಬೈಯ ವಾಂಕೇಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 163 ರನ್‌ಗಳ ಸವಾಲನ್ನು ಪಡೆದ ಮುಂಬೈ ತಂಡ ಇನ್ನೂ 1 ಎಸೆತವನ್ನು ಬಾಕಿ ಉಳಿಸಿ ಐದು ವಿಕೆಟ್ ನಷ್ಟದಲ್ಲಿ 165 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.ಆರ್‌ಸಿಬಿ ಎಂಟನೆ ಸೋಲು ಅನುಭವಿಸಿದ್ದು ಪ್ಲೇ -ಆಫ್‌ಗೇರುವ ಅವಕಾಶವನ್ನು ಕಳೆದುಕೊಂಡಿದೆ.
ಮುಂಬೈ ತಂಡದ ನಾಯಕ ರೋಹಿತ್ ಶರ್ಮ (ಔಟಾಗದೆ 56) ಅರ್ಧಶತಕ ದಾಖಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಬಟ್ಲರ್(33), ರಾಣಾ (27), ಪೊಲಾರ್ಡ್(17), ಹಾರ್ದಿಕ್ ಪಾಂಡ್ಯ(ಔಟಾಗದೆ 14) ಎರಡಂಕೆಯ ಕೊಡುಗೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರಂಭಿಕ ದಾಂಡಿಗ ಪಾರ್ಥಿವ್ ಪಟೇಲ್(0) ಖಾತೆ ತೆರೆಯಲಿಲ್ಲ. ಕೃನಾಲ್ ಪಾಂಡ್ಯ 2 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಕರಣ್ ಶರ್ಮ 9 ರನ್ ಗಳಿಸಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 162 ರನ್ ಗಳಿಸಿತ್ತು.ಎಬಿ ಡಿವಿಲಿಯರ್ಸ್ 43ರನ್, ವಿರಾಟ್ ಕೊಹ್ಲಿ 20ರನ್, ಮನ್‌ದೀಪ್ 17ರನ್, ಹೆಡ್ 12ರನ್, ಜಾಧವ್ 28ರನ್, ಪವನ್ ನೇಗಿ 35 ರನ್, ವ್ಯಾಟ್ಸನ್ 3ರನ್ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ವಿವರ
ಆರ್‌ಸಿಬಿ 20 ಓವರ್‌ಗಳಲ್ಲಿ 162/8( ಎಬಿಡಿ 43, ನೇಗಿ 35; ಮೆಕ್ಲೀನಘನ್ 34ಕ್ಕೆ 3)
ಮುಂಬೈ ಇಂಡಿಯನ್ಸ್ 19.5 ಓವರ್‌ಗಳಲ್ಲಿ 165/5( ರೋಹಿತ್ ಶರ್ಮ 56, ಬಟ್ಲರ್ 33; ನೇಗಿ 17ಕ್ಕೆ 2).
ಪಂದ್ಯಶ್ರೇಷ್ಠ: ರೋಹಿತ್ ಶರ್ಮ.
,,,,,,,