ರಜೆ ಕೇಳಿದ ಬಸ್ ನಿರ್ವಾಹಕನ ಕೈ ಮುರಿದ ಡಿಪೋ ಮ್ಯಾನೇಜರ್!
Update: 2017-05-02 12:14 IST
ಧಾರವಾಡ, ಮೇ 2: ಒಂದು ದಿನದ ರಜೆ ಕೇಳಿದಕ್ಕೆ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ಒಬ್ಬರು ಬಸ್‍ನ ನಿರ್ವಾಹಕನಿಗೆ ಲಾಠಿಯಿಂದ ಬಡಿದು ಆತನ ಕೈ ಮುರಿದ ಘಟನೆ ನಡೆದಿದೆ.
ಬಸ್ ನಿರ್ವಾಹಕ ಮಂಜುನಾಥ್ ಹುಕ್ಕೇರಿ ಎಂಬವರೇ ಧಾರವಾಡದ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ದೀಪಕ್ ಜಾಧವ್ ಅವರ ಲಾಠಿಯ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾದವರು. ದೀಪಕ್ ಜಾಧವ್ ಅವರು ಮಂಜುನಾಥ್ ಹುಕ್ಕೇರಿಗೆ ಲಾಠಿಯಿಂದ ಹೊಡೆದಿದ್ದರಿಂದ ಮಂಜುನಾಥ್ ಅವರ ಕೈ ಮುರಿದಿದೆ ಎಂದು ಆರೋಪಿಸಲಾಗಿದೆ. ಕೈ ಮುರಿತಕ್ಕೊಳಗಾಗಿರುವ ಮಂಜುನಾಥ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.