ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು: ಪೋಪ್
ವ್ಯಾಟಿಕನ್‌ಸಿಟಿ,ಮೇ 2: ಅಮೆರಿಕ ಮತ್ತು ಉತ್ತರಕೊರಿಯ ನಡುವಿನ ಘರ್ಷಣೆ ಮೂರನೆ ಜಾಗತಿಕ ಯುದ್ಧಕ್ಕೆ ದಾರಿಯಾದೀತು ಎನ್ನುವ ವರದಿಗಳಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ. ನೋರ್ವೆಯಂತಹ ದೇಶಗಳು ಸಮಸ್ಯೆ ಪರಿಹಾರದ ಮಧ್ಯಸ್ಥಿಕೆ ವಹಿಸಲು ಸದಾ ಸಿದ್ಧವಿದೆ ಎಂದು ಅವರುಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ನೋಡುವಾಗ ಬಿಗಡಾಯಿಸಿದಂತೆ ಕಾಣುತ್ತಿದೆ. ಈಗ ರಾಜತಾಂತ್ರಿಕ ಪರಿಹಾರ ಹುಡುಕಬೇಕಾಗಿದೆ. ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು. ಯಾವುದಾದರೂ ಪರಿಸ್ಥಿತಿ ಘರ್ಷಣೆ ತೀವ್ರವಾಗಿಯುದ್ಧ ಸ್ಫೋಟಗೊಂಡರೆಮಾನವ ಸಮುದಾಯದ ದೊಡ್ಡದಾದ ಒಂದು ಭಾಗ ಭೂಮಿಯಿಂದಲೇ ಅಪ್ರತ್ಯಕ್ಷವಾಗುವುದರಲ್ಲಿ ಸಂದೇಹವಿಲ್ಲ ಎಂದು ಪೋಪ್ ಎಚ್ಚರಿಕೆ ನೀಡಿದರು.
ನಿಷೇಧಗಳನ್ನು ಉಲ್ಲಂಘಿಸಿ ಉತ್ತರ ಕೊರಿಯ ಪುನಃ ಬ್ಯಾಲೆಸ್ಟಿಕ್ ಮಿಸೈಲ್‌ಗಳನ್ನು ಪರೀಕ್ಷಿಸುತ್ತಿದೆ. ಈ ಪರಿಸ್ಥಿತಿಯನ್ನು ಮನಗಂಡು ಪೋಪ್ ಪ್ರತಿಕ್ರಿಯಿಸಿದ್ದಾರೆ. ಈಜಿಪ್ಟ್‌ನ ಭೇಟಿ ಯಿಂದ ಮರುಳುತ್ತಿದ್ದ ವೇಳೆವಿಮಾನ ನಿಲ್ದಾಣದಲ್ಲಿ ಪತ್ರಕರ್ತರಿಗೆನೀಡಿದ ಸಂದರ್ಶನದಲ್ಲಿ ಪೋಪ್ ಈ ರೀತಿ ತನ್ನ ಆತಂಕವನ್ನು ತೋಡಿಕೊಂಡಿದ್ದಾರೆ.