×
Ad

ಅಮೆರಿಕನ್ ಏರ್‌ಲೈನ್ಸ್ ವಿರುದ್ಧ ಮುಸ್ಲಿಮ್ ಉದ್ಯೋಗಿ ದೂರು

Update: 2017-05-02 20:47 IST

ನ್ಯೂಯಾರ್ಕ್, ಮೇ 2: ತನ್ನ ಸಹೋದ್ಯೋಗಿಗಳು ತನ್ನನ್ನು ಭಯೋತ್ಪಾದಕ ಹಾಗೂ ಹಿಝ್ಬುಲ್ಲಾ ಮತ್ತು ತಾಲಿಬಾನ್ ಮುಂತಾದ ಭಯೋತ್ಪಾದಕ ಗುಂಪುಗಳ ಸದಸ್ಯ ಎಂಬುದಾಗಿ ಪದೇ ಪದೇ ಕರೆಯುತ್ತಾರೆ ಎಂದು ಆರೋಪಿಸಿ ಮುಸ್ಲಿಮ್ ವಿಮಾನ ಸಹಾಯಕಿಯೊಬ್ಬರು ಅಮೆರಿಕನ್ ಏರ್‌ಲೈನ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಈ ಕಿರುಕುಳದ ಬಗ್ಗೆ ತಾನು ಕಂಪೆನಿಯ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಎಫ್‌ಬಿಐ ಏಜಂಟ್‌ಗಳು ತನ್ನ ಮನೆಗೆ ಬಂದಿದ್ದಾರೆ ಎಂದು ಮಿಡಲ್‌ಸೆಕ್ಸ್ ಕೌಂಟಿಯ ಸುಪೀರಿಯರ್ ಕೋರ್ಟ್‌ನಲ್ಲಿ ಇತ್ತೀಚೆಗೆ ಹೂಡಿದ ಮೊಕದ್ದಮೆಯಲ್ಲಿ ನ್ಯೂಜರ್ಸಿಯ ಎಡಿಸನ್ ನಿವಾಸಿ ಫರ್ಖಾನ್ ಮಹ್ಮೂದ್ ಶಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News