×
Ad

10.53 ಕೋಟಿ ರೂ. ಮೌಲ್ಯದ ಚಿತ್ರ ಕಳವು

Update: 2017-05-02 20:52 IST

ಪ್ಯಾರಿಸ್, ಮೇ 2: ತನ್ನ ಸುಮಾರು 1.5 ಮಿಲಿಯ ಯುರೋ (ಸುಮಾರು 10.53 ಕೋಟಿ ರೂಪಾಯಿ) ಮೌಲ್ಯದ ಚಿತ್ರವೊಂದು ಕಳವಾಗಿದೆ ಎಂದು ಪ್ಯಾರಿಸ್‌ನ ಕಲಾ ವ್ಯಾಪಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಅವರು ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಗೊತ್ತುಪಡಿಸಿದ ಅವರು, ಅದರ ಹಿಂಭಾಗದಲ್ಲಿ ಚಿತ್ರವನ್ನು ಇಟ್ಟಿದ್ದರು. ಬಳಿಕ ಅದನ್ನು ಮರೆತುಬಿಟ್ಟರು. ಕಾರನ್ನು ಪತ್ತೆಹಚ್ಚಲು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ಸು ಕಾಣದೆ ಶನಿವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News