ಚೀನಾ : ರೈಲು ಸುರಂಗದಲ್ಲಿ ಸ್ಫೋಟ; 12 ಸಾವು

Update: 2017-05-03 14:51 GMT

ಬೀಜಿಂಗ್, ಮೇ 3: ನೈರುತ್ಯ ಚೀನಾದ ಹೈಸ್ಪೀಡ್ ರೈಲು ಸುರಂಗದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.

ರಕ್ಷಣಾ ಕಾರ್ಯಕರ್ತರು 14 ಗಂಟೆಗಳಿಗೂ ಅಧಿಕ ಕಾಲ ಅವಶೇಷಗಳ ನಡುವೆ ಬದುಕುಳಿದವರಿಗಾಗಿ ಶೋಧ ನಡೆಸಿದರು. ಗುಯಿಝು ಪ್ರಾಂತದಲ್ಲಿ ಸುರಂಗ ಮಾರ್ಗದಲ್ಲಿ ರಂಧ್ರ ಕೊರೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಅನಿಲ ತುಂಬಿತು ಹಾಗೂ ಸ್ಫೋಟ ಸಂಭವಿಸಿತು ಎಂದು ಅಧಿಕೃತ ಕ್ಸಿನುವ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುಮಾರು 2,000 ರಕ್ಷಣಾ ಕಾರ್ಯಕರ್ತರು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News