×
Ad

ಸೌರಮಂಡಲದ ಸಮೀಪದಲ್ಲೇ ಇನೊಂದು ಗ್ರಹ ಮಂಡಲ

Update: 2017-05-03 21:06 IST

ನ್ಯೂಯಾರ್ಕ್, ಮೇ 3: ನಮ್ಮ ಸೌರಮಂಡಲದಿಂದ ಕೇವಲ 10.5 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ರಹ ಮಂಡಲವೊಂದು ನಮ್ಮ ಸೌರಮಂಡಲವನ್ನೇ ಹೋಲುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಮ್ಮ ಸೂರ್ಯನಂಥ ನಕ್ಷತ್ರಗಳ ಸುತ್ತ ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಎನ್ನುವುದನ್ನು ಸಂಶೋಧನೆ ಮಾಡಲು ನೂತನ ಗ್ರಹ ಮಂಡಲವು ಅತ್ಯಂತ ಪ್ರಶಸ್ತ ಸ್ಥಳವಾಗಿದೆ ಎಂದು ಅಮೆರಿಕದ ಆ್ಯರಿರೆನ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳುತ್ತಾರೆ.

ನೂತನ ನಕ್ಷತ್ರ ಎಪ್ಸಿಲಾನ್ ಎರಿಡನಿ ಅವಶೇಷಗಳ ಡಿಸ್ಕೊಂದನ್ನು ಹೊಂದಿದೆ. ಈ ಅವಶೇಷಗಳು ಅನಿಲ ಮತ್ತು ಧೂಳು ಹಾಗೂ ಅದೇ ವೇಳೆ ಸಣ್ಣ ಕಲ್ಲು ಮಣ್ಣು ಮತ್ತು ಶೀತಲ ರೂಪಗಳನ್ನು ತಾಳುತ್ತವೆ ಎನ್ನುವುದನ್ನು ಸಂಶೋಧನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News