ಮೆದುಳಿನ ಲಕ್ವ ಕಾಯಿಲೆಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Update: 2017-05-03 18:30 GMT

ಮಂಗಳೂರು, ಮೇ 3: ಮೆದುಳಿಗೆ ರಕ್ತಸಂಚಾರಕ್ಕೆ ಸ್ಥಗಿತಗೊಂಡಾಗ ಮೆದುಳಿನ ಆಘಾತ (ಲಕ್ವ) ಸಂಭವಿಸುತ್ತದೆ. ಮೆದುಳಿಗೆ ರಕ್ತ ಸರಬರಾಜಾಗುವ ಧಮನಿ ಸಂಕುಚಿತಗೊಂಡು ಉಂಟಾಗುವ ಈ ಸಮಸ್ಯೆಗೆ ವೈದ್ಯಕೀಯವಾಗಿ ‘ಕ್ಯರೋಟಿಡ್ ಆರ್ಟರಿ ಸ್ಟೆನೊಸಿಸ್’ ಎಂದು ಹೆಸರಿದೆ. ರಕ್ತ ಸರಬರಾಜು ಮಾಡುವ ಧಮನಿಯನ್ನು ವಿಸ್ತರಿಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಆ ಬಳಿಕ ತೆಳುವಾದ ಟ್ಯೂಬೊಂದನ್ನು (ಸ್ಟೆಂಟ್) ರಕ್ತನಾಳದ ಹೊರಭಾಗದಲ್ಲಿ ಅಳವಡಿಸಲಾಗುತ್ತದೆ. ಈ ರೀತಿಯ ಚಿಕಿತ್ಸೆಯನ್ನು ಇತ್ತೀಚೆಗೆ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಯಿತು. ‘ಲೋಕಲ್ ಅನಸ್ತೇಷಿಯಾ’ ಎಂದು ಕರೆಯಲಾಗುವ ಚಿಕಿತ್ಸಾ ಪದ್ದತಿಯ ಮೂಲಕ ಚಿಕಿತ್ಸೆ ನಡೆಸಲಾಯಿತು. ಈ ಪದ್ದತಿಯಲ್ಲಿ ಚಿಕಿತ್ಸೆಯ ಸಂದರ್ಭ ರೋಗಿಯು ಸಂಪೂರ್ಣ ಅರಿವಳಿಕೆ (ಜ್ಞಾನ) ಹೊಂದಿರುತ್ತಾನೆ ಮತ್ತು ಚಿಕಿತ್ಸೆ ನೀಡುವ ವೈದ್ಯರ ತಂಡದೊಡನೆ ಮಾತಾಡುತ್ತಿರುತ್ತಾನೆ ಎಂದು ನರಶಸ್ತ್ರ ಚಿಕಿತ್ಸಾತಜ್ಞ ಡಾ. ಮಧುಕರ್ ನಾಯಕ್ ಹೇಳಿದ್ದಾರೆ. ಪಶ್ಚಿಮ ಕರ್ನಾಟಕ ಪ್ರದೇಶದಲ್ಲಿ ಈ ರೀತಿಯ ಚಿಕಿತ್ಸಾ ಪದ್ದತಿಯಲ್ಲಿ ತಜ್ಞರಾಗಿರುವ ಏಕೈಕ ವೈದ್ಯರಾಗಿದ್ದಾರೆ ಮಧುಕರ ನಾಯಕ್. ಈ ಚಿಕಿತ್ಸೆಗೆ ಒಳಗಾದ ವ್ಯಕ್ತಿ 2ರಿಂದ ಮೂರು ದಿನಗಳೊಳಗೆ ಮನೆಗೆ ನಡೆದುಕೊಂಡೇ ಹೋಗಲು ಶಕ್ತನಾಗುತ್ತಾನೆ ಎಂದು ಮತ್ತೋರ್ವ ತಜ್ಞವೈದ್ಯ ಡಾ. ಗೆವರ್ ಲೋಬೋ ತಿಳಿಸಿದ್ದಾರೆ. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಪಶ್ಚಿಮ ಕರ್ನಾಟಕದಲ್ಲಿ ಈ ರೀತಿಯ ಚಿಕಿತ್ಸಾ ಕ್ರಮ ಇರುವ ಏಕೈಕ ಆಸ್ಪತ್ರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News