×
Ad

ಮುಲಾಯಂಗೆ ಎಸ್ ಪಿ ನಾಯಕತ್ವ ನೀಡದಿದ್ದರೆ ಹೊಸ ಮೈತ್ರಿಕೂಟ: ಶಿವಪಾಲ್ ಬೆದರಿಕೆ

Update: 2017-05-04 13:04 IST

ಇಟಾವ,ಮೇ 4: ಸಮಾಜವಾದಿ ಪಕ್ಷದ ನಾಯಕತ್ವ ಮುಲಾಯಂಸಿಂಗ್‌ರಿಗೆ ಅಖಿಲೇಶ್ ಹಸ್ತಾಂತರಿಸದಿದ್ದರೆ ಹೊಸ ಜಾತ್ಯತೀತ ಮೈತ್ರಿಕೂಟವನ್ನು ರಚಿಸುತ್ತೇನೆ ಎಂದು ಅಖಿಲೇಶ್ ಚಿಕ್ಕಪ್ಪ, ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಬೆದರಿಕೆಹಾಕಿದ್ದಾರೆ.

“ಪಕ್ಷದ ನಿಯಂತ್ರಣ ನೇತಾಜಿ(ಮುಲಾಯಂ)ಗೆ ವಹಿಸಿಕೊಡುವೆ ಎಂದು ಅಖಿಲೇಶ್ ಮಾತು ಕೊಟ್ಟಿದ್ದಾರೆ. ಇದಕ್ಕೆ ಮೂರು ತಿಂಗಳ ಸಮಯವನ್ನೂ ನಿಗದಿಗೊಳಿಸಲಾಯಿತು. ಅಖಿಲೇಶ್ ಮಾತು ಪಾಲಿಸಬೇಕು. ನಾವು ಪಾರ್ಟಿಯನ್ನು ಬಲಪಡಿಸುತ್ತೇವೆ" ಎಂದು ಶಿವಪಾಲ್ ಹೇಳಿದರು.

ಸೋಶಿಲಿಸ್ಟ್ ಆಶಯದವರನ್ನು ಒಂದು ವೇದಿಕೆಗೆ ತರುವ ಅಭಿಯಾನ ಹಮ್ಮಿಕೊಳ್ಳಲಿದ್ದೇನೆ ಎಂದು ಶಿವಪಾಲ್

ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷ ನೆಲಕಚ್ಚಿತ್ತು. ಕಾಂಗ್ರೆಸ್‌ನೊಂದಿಗೆ ಮೈತ್ರಿಮಾಡಿಕೊಂಡ ಸಮಾಜವಾದಿ ಪಕ್ಷಕ್ಕೆ 404 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ 54 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. ಆದ್ದರಿಂದ ಅಖಿಲೇಶ್‌ರ ವಿರುದ್ಧ ಈಗ ಬಲಿಷ್ಠಗೊಂಡಿರುವ ಅತೃಪ್ತರ ಲಾಭವನ್ನು ಎತ್ತಿಹಿಡಿದು ಮುಲಾಯಂರನ್ನು ಮತ್ತೆ ಮುಂಚೂಣಿಗೆ ತರಲು ಶಿವಪಾಲ್ ಯಾದವ್ ಯತ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News