×
Ad

ಚೆನ್ನೈನಲ್ಲಿ ವಾಯುಪಡೆಯ ಏರ್‌ಮನ್ ಆತ್ಮಹತ್ಯೆ

Update: 2017-05-04 15:23 IST

ಚೆನ್ನೈ,ಮೇ 4: ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 23 ಹರೆಯದ ಏರ್‌ಮನ್ ಬುಧವಾರ ತಡರಾತ್ರಿ ನಗರದ ಹೊರವಲಯದ ತಾಂಬರಮ್‌ನಲ್ಲಿರುವ ವಾಯುಪಡೆಯ ನೆಲೆಯಲ್ಲಿ ಸ್ವತಃ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ರಕ್ಷಣಾ ಮತ್ತು ಪೊಲೀಸ್ ಅಧಿಕಾರಿಗಳು ಗುರುವಾರ ಇಲ್ಲಿ ತಿಳಿಸಿದರು.

ಇದೊಂದು ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಕ್ಷಣಾ ಅಧಿಕಾರಿಯೋರ್ವರು ತಿಳಿಸಿದರಾದರೂ, ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News