×
Ad

ಹಿಮಪಾತಕ್ಕೆ ಸಿಲುಕಿದ ಬಸ್,ಐವರು ಪ್ರಯಾಣಿಕರ ಸಾವು

Update: 2017-05-04 16:41 IST

ಭದೇರ್ವಾ,ಮೇ 4: ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭದೇರ್ವಾ-ಬಶೋಲಿ ಹೆದ್ದಾರಿಯಲ್ಲಿ ಇಂದು ಮಿನಿಬಸ್‌ವೊಂದು ಹಿಮಪಾತಕ್ಕೆ ಸಿಲುಕಿದ್ದು, ಅದರಲ್ಲಿ ಪ್ರಯಾಣಿ ಸುತ್ತಿದ್ದ ಐವರು ಮೃತಪಟ್ಟು, ಇತರ ಹಲವರು ಗಾಯಗೊಂಡಿದ್ದಾರೆ.

 ಬಾನಿಯಿಂದ ಭದೇರ್ವಾಕ್ಕೆ ಬರುತ್ತಿದ್ದ, 12 ಪ್ರಯಾಣಿಕರನ್ನು ಹೊತ್ತಿದ್ದ ಈ ಬಸ್ ಹಿಮಪಾತಕ್ಕೆ ಸಿಲುಕಿ 1500 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ವಾಹನದ ಚಾಲಕ ಸೇರಿದಂತೆ ಮೂವರು ಗಾಯಾಳುಗಳನ್ನು ರಕ್ಷಿಸಿ ಭದೇರ್ವಾ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಹಿಮದ ರಾಶಿಯಡಿ ಸಿಲುಕಿದ್ದ ಐದು ಶವಗಳನ್ನು ಹೊರತೆಗೆಯಲಾಗಿದ್ದು, ಇತರರಿ ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉಪವಿಭಾಗ ಪೊಲೀಸ್ ಅಧಿಕಾರಿ ಬೃಜೇಶ್ ಶರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News