ಹಿಂಸಾ ವೀಡಿಯೊ ನಿಭಾಯಿಸಲು 3,000 ಸಿಬ್ಬಂದಿ : ಫೇಸ್‌ಬುಕ್
Update: 2017-05-04 20:44 IST
ಸ್ಯಾನ್‌ಫ್ರಾನ್ಸಿಸ್ಕೊ, ಮೇ 4: ಹತ್ಯೆ, ಆತ್ಮಹತ್ಯೆ ಮತ್ತು ಇತರ ಹಿಂಸಾತ್ಮಕ ಕೃತ್ಯಗಳನ್ನು ತೋರಿಸುವ ವೀಡಿಯೊಗಳನ್ನು ತೆಗೆದುಹಾಕುವ ಕೆಲಸವನ್ನು ತ್ವರಿತಗೊಳಿಸುವುದಕ್ಕಾಗಿ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಒಂದು ವರ್ಷದ ಅವಧಿಯಲ್ಲಿ 3,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ. ತನ್ನ ಸಾರ್ವಜನಿಕ ಚಿತ್ರಣಕ್ಕೆ ಎದುರಾಗಿರುವ ಅತಿ ದೊಡ್ಡ ಸವಾಲನ್ನು ನಿಭಾಯಿಸುವುದಕ್ಕಾಗಿ ಅದು ಈ ಗಂಭೀರ ಕ್ರಮಕ್ಕೆ ಮುಂದಾಗಿದೆ.