ಮಾಣಿ: ಕ್ವಾಲಿಟಿ ಕ್ರೀಡೋತ್ಸವ ಸಮಾರೋಪ

Update: 2017-05-06 04:48 GMT

ವಿಟ್ಲ, ಮೇ 6: ಮಾಣಿಯ ಕ್ವಾಲಿಟಿ ಫ್ರೆಂಡ್ಸ್ ಇದರ 2ನೆ ವಾರ್ಷಿಕ ‘ಕ್ವಾಲಿಟಿ ಕ್ರೀಡೋತ್ಸವ 2017 ಇತ್ತೀಚೆಗೆ ಮಾಣಿ ಗಾಂಧಿ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಉದ್ಘಾಟಿಸಿದರು. ಜಿಪಂ ಸದಸ್ಯೆ ಮಂಜುಳಾ ಮಾವೆ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಸದಸ್ಯರಾದ ಮಂಜುಳಾ ಕುಶಲ ಎಂ. ಪೆರಾಜೆ, ಆದಂ ಕುಂಞಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಂತಿ ಪೂಜಾರ್ತಿ ಬಾಕಿಲ, ಬಂಟ್ವಾಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕುಲಾಲ್ ನೆಟ್ಲ, ತಾ.ಪಂ. ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮಾಧವ ಮಾವೆ, ಚಲನಚಿತ್ರ ನಟ ಚೇತನ್ ರೈ ಮಾಣಿ, ಮಾಣಿ ಗ್ರಾ.ಪಂ. ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ, ಸದಸ್ಯರಾದ ಇಬ್ರಾಹೀಂ ಕೆ. ಮಾಣಿ, ನಾರಾಯಣ ಶೆಟ್ಟಿ ತೋಟ, ನೇರಳಕಟ್ಟೆ ಸಿ.ಎ. ಬ್ಯಾಂಕ್ ಮಾಣಿ ಶಾಖಾಧಿಕಾರಿ ಸಂಜೀವ ಪೂಜಾರಿ, ಉದ್ಯಮಿ ಎಂ. ನಾಗರಾಜ ಶೆಟ್ಟಿ ಮಾಣಿ, ಯುವ ವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ಕೆ.ಪ್ರಭಾಕರ ಸಾಲ್ಯಾನ್, ಡಾ.ಶ್ರೀನಾಥ್ ಆಳ್ವ, ಮಾಣಿ ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಬಂಟ್ವಾಳ ಎಪಿಎಂಸಿ ಸದಸ್ಯ ಕುಶಲ ಎಂ. ಪೆರಾಜೆ, ಉದ್ಯಮಿಗಳಾದ ಹರೀಶ್ ಶೆಟ್ಟಿ ಮಾಣಿ, ಸದಾಶಿವ ಶೆಟ್ಟಿ ದತ್ತ ಕೃಪಾ, ಪುರುಷೋತ್ತಮ ಪಾಟೀಲ ಸೂರಿಕುಮೇರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ರೀಡಾಕೂಟದಲ್ಲಿ ಸೀಮಿತ ವಲಯ ಮಟ್ಟದ ಕಬಡ್ಡಿ, ವಾಲಿಬಾಲ್ ಹಾಗೂ ಮುಕ್ತ ವಿಭಾಗದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟಗಳು ನಡೆದವು. ಕಬಡ್ಡಿ ಪಂದ್ಯಾಟದ ತೀರ್ಪುಗಾರರಾಗಿ ಹಬೀಬ್ ಕೆ. ಮಾಣಿ, ಸಂದೀಪ್, ಜಗದೀಶ್ ಸಹಕರಿಸಿದರು.

ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿದರು. ಮಜೀದ್ ಮಾಣಿ ವಂದಿಸಿದರು, ಲತೀಫ್ ನೇರಳಕಟ್ಟೆ, ಗಝ್ಝೆಲಿ ಕುಡ್ತಮುಗೇರು, ನಿಹಾಲ್ ನೇರಳಕಟ್ಟೆ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು.
 
ಕಬಡ್ಡಿ ಮಾಣಿ ಯುವಕ ಮಂಡಲಕ್ಕೆ ಪ್ರಶಸ್ತಿ: 

ಸೀಮಿತ ವಲಯದ 8 ತಂಡಗಳ ಮಾದರಿ ಲೀಗ್ ಕಬಡ್ಡಿ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ತಂಡ ಪ್ರಥಮ, ಫ್ರೆಂಡ್ಸ್ ಕೆದಿಲ ತಂಡ ದ್ವಿತೀಯ, ಪಿಂಕ್ ಪ್ಯಾಂಥರ್ಸ್‌ ಪೆರಾಜೆ ತಂಡ ತೃತೀಯ ಹಾಗೂ ಫ್ರೆಂಡ್ಸ್ ಗೋಳಿಕಟ್ಟೆ ತಂಡ ಚತುರ್ಥ ಸ್ಥಾನ ಗಳಿಸಿದವು. ಮಾಣಿ ಯುವಕ ಮಂಡಲ ತಂಡದ ನವೀನ ಆಲ್‌ರೌಂಡರ್, ತಮ್ಸೀರ್ ಉತ್ತಮ ಹಿಡಿತಗಾರ ಹಾಗೂ ಕೆದಿಲ ತಂಡದ ಅಬ್ದುಲ್ ರಹಿಮಾನ್ ಉತ್ತಮ ದಾಳಿಗಾರ ಪ್ರಶಸ್ತಿಗೆ ಪಾತ್ರರಾದರು.

ಬೊಳ್ಳಾರ್ ತಂಡಕ್ಕೆ ವಾಲಿಬಾಲ್ ಟ್ರೋಫಿ:

ವಾಲಿಬಾಲ್ ಪಂದ್ಯಾಟದದಲ್ಲಿ ಸತ್ಯದೇವತಾ ಬೊಳ್ಳಾರ್ ತಂಡ ಪ್ರಥಮ, ಯುವಕ ಮಂಡಲ ಮಾಣಿ ತಂಡ ದ್ವಿತೀಯ, ಪ್ಲೇ ಬಾಯ್ಸಿ ಕರಿಮಜಲು ತಂಡ ತೃತೀಯ ಹಾಗೂ ಅಯೋಧ್ಯಾ ಫ್ರೆಂಡ್ಸ್ ಪೆರ್ನೆ ತಂಡ ಚತುರ್ಥ ಸ್ಥಾನ ಗಳಿಸಿದವು.

ಹಗ್ಗಜಗ್ಗಾಟದಲ್ಲಿ ಕಾಡಬೆಟ್ಟು ತಂಡಕ್ಕೆ ಪ್ರಶಸ್ತಿ:

ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಕಾಡಬೆಟ್ಟು ಎ ತಂಡ ಪ್ರಥಮ, ಬೆಳ್ತಂಗಡಿ ತಂಡ ದ್ವಿತೀಯ, ನೀರುಮಾರ್ಗ ತಂಡ ತೃತೀಯ ಹಾಗೂ ಕಾಡಬೆಟ್ಟು ಸಿ ತಂಡ ಚತುರ್ಥ ಸ್ಥಾನ ಗಳಿಸಿತು.

ಫ್ರೆಂಡ್ಸ್ ಪುತ್ತೂರು ತಂಡಕ್ಕೆ ಕ್ರಿಕೆಟ್ ಟ್ರೋಫಿ:

36 ತಂಡಗಳು ಪಾಲ್ಗೊಂಡಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಪುತ್ತೂರು ತಂಡ ಪ್ರಥಮ ಹಾಗೂ ಫ್ರೆಂಡ್ಸ್ ಇರ್ತಡ್ಕ ತಂಡ ದ್ವಿತೀಯ ಸ್ಥಾನ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News