ಕೇರಳದ ವೈದ್ಯ ಅಮೆರಿಕದಲ್ಲಿ ಗುಂಡೇಟಿಗೆ ಬಲಿ
Update: 2017-05-06 11:08 IST
ಮಾವೇಲಿಕರ,ಮೇ 6: ಕೇರಳದ ಮಾವೇಲಿಕರದಯುವ ವೈದ್ಯ ಅಮೆರಿಕದ ಮಿಷಿಗನ್‌ನಲ್ಲಿ ಕಾರಿನಲ್ಲಿ ಗುಂಡೇಟಿಗೀಡಾಗಿ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಮೃತರನ್ನು ಡಾ.ರಮೇಶ್ ಕುಮಾರ್(32) ಎಂದು ಗುರುತಿಸಲಾಗಿದೆ. ಅವರು ಮಾವೇಲಿಕರದ ನಿವಾಸಿ ಮತ್ತು ಅಮೆರಿಕದ ವೈದ್ಯರ ಸಂಘಟನೆಯ ಮಾಜಿ ಅಧ್ಯಕ್ಷ ಡಾ. ನರೇಂದ್ರ ಕುಮಾರ್ ಪುತ್ರ. ಕಾರಿನಹಿಂಬದಿ ಸೀಟಿನಲ್ಲಿ ಗುಂಡೇಟಿಗೀಡಾಗಿ ಮೃತಪಟ್ಟ ಸ್ಥಿತಿಯಲ್ಲಿ ಡಾ. ರಮೇಶ್ ಕುಮಾರ್ ಪತ್ತೆಯಾಗಿದ್ದಾರೆ.