ದ.ಕಾಶ್ಮೀರದ ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರ ಸ್ಥಗಿತ

Update: 2017-05-06 13:11 GMT

ಶ್ರೀನಗರ, ಮೇ 6: ಭಯೋತ್ಪಾದಕರು ಬ್ಯಾಂಕ್‌ಗಳ ಮೇಲೆ ದಾಳಿ ನಡೆಸುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರದ ಸೂಕ್ಷ್ಮ ಪ್ರದೇಶದಲ್ಲಿರುವ 40 ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರ ಸ್ಥಗಿತಗೊಳಿಸಲಾಗಿದೆ.

 ದಕ್ಷಿಣ ಕಾಶ್ಮೀರದ ಪುಲ್‌ವಾಮ ಮತ್ತು ಶೊಪಿಯಾನ್ ಜಿಲ್ಲಾ ವ್ಯಾಪ್ತಿಯ ಬ್ಯಾಂಕ್‌ಗಳ ಮೇಲೆ ಉಗ್ರರ ದಾಳಿ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನೀಡಿ ದ ಸಲಹೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಜಮ್ಮು-ಕಾಶ್ಮೀರ ಬ್ಯಾಂಕ್ ಮತ್ತು ಇಲಾಖಿ ದೆಹಾತಿ ಬ್ಯಾಂಕ್‌ಗಳ ಶಾಖೆಗಳಲ್ಲಿ ನಗದು ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಆದರೆ ಎಟಿಎಂ ಸೇವೆ ಸೇರಿದಂತೆ ಇತರ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಯಥಾಸ್ಥಿತಿ ಮುಂದುವರಿಯಲಿದೆ . ಇದು ತಾತ್ಕಾಲಿಕ ಕ್ರಮವಾಗಿದ್ದು ಬ್ಯಾಂಕ್ ಸಿಬಂದಿಗಳ ಮತ್ತು ಬ್ಯಾಂಕ್‌ನ ಆಸ್ತಿಪಾಸ್ತಿಯ ರಕ್ಷಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಜಮ್ಮು-ಕಾಶ್ಮೀರ ಬ್ಯಾಂಕ್‌ನ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News