ಶರೀಫ್ ವಿರುದ್ಧ ವಿಚಾರಣೆಗೆ ‘ಜಿಟ್’ ತಂಡ ನೇಮಕ
Update: 2017-05-06 21:33 IST
ಇಸ್ಲಾಮಾಬಾದ್, ಮೇ 6: ವಿದೇಶಗಳಲ್ಲಿ ಅಕ್ರಮ ಹೂಡಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಕುಟುಂಬದ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಆರು ಸದಸ್ಯರ ಉನ್ನತಾಧಿಕಾರದ ಜಂಟಿ ತನಿಖಾ ತಂಡ (ಜಿಟ್)ವನ್ನು ರಚಿಸಿದೆ.
ಎಪ್ರಿಲ್ 20ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ, ವಿವಿಧ ಇಲಾಖೆಗಳು ಸಲ್ಲಿಸಿದ ತನಿಖಧಿಕಾರಿಗಳ ಹೆಸರುಗಳನ್ನು ಮೂವರು ಸದಸ್ಯರ ನ್ಯಾಯಪೀಠವು ಪರಿಶೀಲಿಸಿತು. ಜಿಟ್ 60 ದಿನಗಳಲ್ಲಿ ತನಿಖೆಯನ್ನು ಮುಗಿಸಬೇಕಾಗಿದೆ.
ಶರೀಫ್ ಕುಟುಂಬ ಹೊರದೇಶಗಳಲ್ಲಿ ಹೂಡಿಕೆ ಮಾಡಿರುವುದು ಪನಾಮ ದಾಖಲೆಗಳಲ್ಲಿ ಬಹಿರಂಗಗೊಂಡ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ)ಯ ಹೆಚ್ಚುವರಿ ನಿರ್ದೇಶಕ ವಾಜಿದ್ ಝಿಯಾ ಅವರನ್ನು ಜಿಟ್ ಮುಖ್ಯಸ್ಥರನ್ನಾಗಿ ನ್ಯಾಯಾಲಯ ನೇಮಿಸಿದೆ.