“ಅದ್ಭುತ ಶಿಶು”ಗಳನ್ನು ಹೆರಲು ಕಾರ್ಯಾಗಾರ ನಡೆಸಲಿದೆಯಂತೆ ಆರೆಸ್ಸೆಸ್ ಪ್ರಾಯೋಜಿತ ಸಂಸ್ಥೆ!

Update: 2017-05-07 04:23 GMT

ಕಲ್ಕತ್ತಾ, ಮೇ 7: ಅದ್ಭುತ ಶಿಶುಗಳು ಅಥವಾ “ಸುಸಂತಾನ್” ಸೃಷ್ಟಿಯ ಬಗ್ಗೆ ಪ್ರಾಚೀನ ಭಾರತೀಯ ರಹಸ್ಯಗಳ ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿರುವ ಆರೆಸ್ಸೆಸ್ ಪ್ರಾಯೋಜಿತ ಸಂಸ್ಥೆಯೊಂದು ಇದೀಗ ಇಕ್ಕಟ್ಟಿಗೆ ಸಿಲುಕಿದೆ.

ಆರೆಸ್ಸೆಸ್ ನ ವೈದ್ಯಕೀಯ ವಿಂಗ್ ಆದ ಆರೋಗ್ಯ ಭಾರತಿ “ಗರ್ಭ್ ಸಂಸ್ಕಾರ್” ಎಂಬ ಕಾರ್ಯಾಗಾರವೊಂದನ್ನು ಆಯೋಜಿಸಿತ್ತು. ಗರ್ಭ್ ಸಂಸ್ಕಾರ್ ಪರಿಣತ, ಗುಜರಾತ್ ಆಯುರ್ವೇದ್ ಯುನಿರ್ಸಿಟಿಯ ವಿಸಿಟಿಂಗ್ ಲೆಕ್ಚರರ್ ಡಾ.ಕರೀಷ್ಮಾ ನರ್ವೀನ್ “ಸೂಪರ್ ಬೇಬಿ” ಅಥವಾ “ಅದ್ಭುತ ಶಿಶು”ಗಳ ಸೃಷ್ಟಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

“ಗರ್ಭ್ ಸಂಸ್ಕಾರವು ಪ್ರತಿಭಾನ್ವಿತ ಮಕ್ಕಳನ್ನು ಹುಟ್ಟಿಸುತ್ತದೆ. ಗರ್ಭಕೋಶದ ಒಳಗೆ ಜೆನೆಟಿಕ್ ಇಂಜಿನಿಯರಿಂಗ್ ನಡೆಸಲಾಗುವುದು” ಎಂದು ಕರೀಷ್ಮಾ ನರ್ವೀನ್ ರ ಸಹೋದ್ಯೋಗಿ ಡಾ.ಹಿತೇಶ್ ಜಾನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಆದರೆ ಈ ಬಗ್ಗೆ ನಗರದ ವೈದ್ಯರು ಆತಂಕ ವ್ಯಕ್ತಪಡಿಸಿದ್ದು, ಬಂಗಾಳದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ “ಇದೊಂದು ಅವೈಜ್ಞಾನಿಕ ಪ್ರಕ್ರಿಯೆ” ಎಂದು ಹೈಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ  ವಿಚಾರಣೆ ನಡೆಸಿದ ಕೋರ್ಟ್ “ಪರಿಣಿತರು” ಕಾರ್ಯಾಗಾರ ನಡೆಸಬೇಕು ಹಾಗೂ ದಂಪತಿಗೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ನೀಡಬಾರದು ಎಂದು ಆದೇಶ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅನನ್ಯ ಚಟರ್ಜಿ, “ಇದು ಮೂಢನಂಬಿಕೆಯ ವಿರುದ್ಧ ವಿಜ್ಞಾನದ ಜಯವಾಗಿದೆ” ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News