ರಾಜಸ್ಥಾನದಲ್ಲಿ ಟ್ರ್ಯಾಕ್ಟರ್ ಅಪಘಾತ: 6 ಮಕ್ಕಳು ಮೃತ್ಯು
Update: 2017-05-07 10:03 IST
ರಾಜಸ್ಥಾನ, ಮೇ 7: ಮಹಿಳೆಯರು ಮತ್ತು ಮಕ್ಕಳನ್ನು ಒಯ್ಯುತ್ತಿದ್ದ ಟ್ರ್ಯಾಕ್ಟರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 6 ಮಕ್ಕಳು ಮೃತಪಟ್ಟು 21ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕುಶಾಲಿಪುರ ವ್ಯಾಪ್ತಿಯ ಲಹ್ಸೋದಾ ಮೋರ್ ಎಂಬಲ್ಲಿ ಸಂಭವಿಸಿದೆ.
ಖಾನ್ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಎರಡು ಟ್ರ್ಯಾಕ್ಟರ್ ಗಳಿದ್ದು, ಒಂದರಲ್ಲಿ ಮಹಿಳೆಯರು ಮತ್ತೊಂದರಲ್ಲಿ ಮಕ್ಕಳಿದ್ದರು. ಇವರೆಲ್ಲರೂ ದೌಲ್ತಾಪುರ್ ಗ್ರಾಮದ ನಿವಾಸಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.