×
Ad

ಜಮೀನು ಬೆಲೆ ಹೆಚ್ಚು ತೋರಿಸಿ ಏಳುಕೋಟಿರೂ. ಸಾಲ: ಎಸ್‌ಬಿಐ ಅಧಿಕಾರಿ ಸಹಿತ 4 ಮಂದಿ ಬಂಧನ

Update: 2017-05-07 14:02 IST

 ಕೊಚ್ಚಿ,ಮೇ 7: ಜಮೀನಿಗೆ ಇರುವುದಕ್ಕಿಂತ ಹೆಚ್ಚು ಬೆಲೆ ತೋರಿಸಿ ಏಳು ಕೋಟಿ ರೂಪಾಯಿವರೆಗೆ ಸಾಲ ನೀಡಿದ ಘಟನೆಯಲ್ಲಿ ಎಸ್‌ಬಿಐ ಅಸಿಸ್ಟೆಂಟ್ ಜನರ್‌ಲ್ ಮ್ಯಾನೇಜರ್ ಸಹಿತ ನಾಲ್ಕುಮಂದಿಯನ್ನು ಸಿಬಿಐ ಬಂಧಿಸಿದೆ. ಈಗ ನವಿಮುಂಬೈ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ತೃಶೂರ್ ರೀಜಿನಲ್ ಶಾಖಾ ಮ್ಯಾನೇಜರ್ ಆಗಿದ್ದ ರಾಧಾಕೃಷ್ಣನ್ ನಾಯರ್, ಎಸ್‌ಬಿಐ ಕುನ್ನಂಕುಳಂ ಶಾಖೆಯ ಸನೋಜ್ ಪಿ. ವಿನ್ಸೆಂಟ್, ರಿಲೇಶನ್‌ಶಿಪ್ ಮ್ಯಾನೇಜರ್ ಅಪ್ಪುಜೋಸ್, ಮ್ಯಾನೇಜ್‌ಮೆಂಟ್ ಕನ್ಸಲ್ಟಂಟ್ ವಿನೋದ್ ದಾಮೋದರನ್‌ರನ್ನು ಸಿಬಿಐ ಕೊಚ್ಚಿ ಯುನಿಟ್ ತಂಡ ಬಂಧಿಸಿದೆ. ನಾಲ್ವರಿಗೂ ಕೋರ್ಟು ರಿಮಾಂಡ್ ವಿಧಿಸಿದೆ.

ತಿರುನಾವಾದ ಎ.ಎಂ ಶೌಕತಲಿಯ ವಾಡಾನಪಳ್ಳಿಯ ಜಮೀನನ್ನು ಅಡವಿಟ್ಟು ವಂಚನೆ ನಡೆಸಲಾಗಿತ್ತು. ಕನ್ಸಲ್ಟಂಟ್ ವಿನೋದ್ ದಾಮೋದರನ್‌ರ ಮೂಲಕ ಶೌಕತಲಿ ಸಾಲಕ್ಕಾಗಿ ಬ್ಯಾಂಕ್‌ನ್ನು ಸಂಪರ್ಕಿಸಿದ್ದರು. ಅರ್ಜಿಸ್ವೀಕರಿಸಿದ ಬಳಿಕ ವಾಲ್ವೇಟರ್ ಗಳಾದ ಸನೋಜ್ ಪಿ. ವಿನ್ಸಂಟ್ ಮತ್ತುಎ.ಎಂ ಶರೀಫ್‌ರನ್ನು ಜಮೀನು ವ್ಯಾಲ್ಯೂವೇಶನ್ ಮಾಡಲು ನೇಮಕಗೊಳಿಸಲಾಗಿತ್ತು.

ಇವರಿಬ್ಬರು ಶೌಕತಲಿಯ 46 ಸೆಂಟ್ಸ್ ಜಾಗಕ್ಕೆ ವ್ಯಾಲ್ಯೂವೇಶನ್ ನಡೆಸಿ 15.11 ಕೋಟಿರೂಪಾಯಿಮತ್ತು 16ಕೋಟಿರೂಪಾಯಿವರೆಗೆ ಬೆಲೆಕಟ್ಟಿ ಎರಡು ಬೇರೆ ಬೇರೆ ವರದಿಗಳನ್ನು ಬ್ಯಾಂಕಿಗೆ ನೀಡಿದ್ದರು. ಇದರ ಆಧಾರದಲ್ಲಿ ಬ್ಯಾಂಕ್ ಶೌಕತಲಿ ಏಳು ಕೋಟಿ ರೂಪಾಯಿ ಸಾಲ ಜಾರಿಮಾಡಿತ್ತು. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿದ್ದ ರಾಧಾಕೃಷ್ಣನ್‌ರ ಮೂಲಕ ಸಾಲ ಮಂಜೂರು ಮಾಡಲಾಗಿತ್ತು. ನಂತರ ಮೊದಲ ಗಡುವಾಗಿ ಶೌಕತ್‌ಅಲಿಗೆ ಒಂದುಕೋಟಿರೂಪಾಯಿಯನ್ನು ಬ್ಯಾಂಕ್ 2015 ಮಾರ್ಚ್‌ನಲ್ಲಿ ಹಸ್ತಾಂತರಿಸಿತ್ತು. ಆದರೆ ಸೆಪ್ಟಂಬರ್‌ಗಾಗುವಾಗ ಮರುಪಾವತಿ ಸರಿಯಾಗಿ ನಡೆಯಲಿಲ್ಲ.

 ನಂತರ ಬ್ಯಾಂಕ್ ಬೇರೆ ವಾಲ್ವೇಟರ್‌ಗಳಿಂದ ಜಮೀನು ವ್ಯಾಲ್ಯೂವೇಶನ್ ಮಾಡಿಸಿತು. ನಂತರ ವ್ಯಾಲ್ಯೂವೇಶನ್ ಮೋಸ ಬ್ಯಾಂಕ್‌ನ ಅರಿವಿಗೆ ಬಂದಿದೆ. ವಾಲ್ವೇಟರ್ ಎ.ಎಂ. ಶರೀಫ್ ಮತ್ತು ಸಾಲಪಡೆದ ಶೌಕತಲಿ ಈಮೊದಲು ಕೋರ್ಟಿನಿಂದ ಜಾಮೀನು ಪಡೆದಿದ್ದರು. ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದೆ ಭಾರೀ ಮೊತ್ತದ ಸಾಲ ನೀಡಿದ್ದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News