ಫ್ರಾನ್ಸ್‌ನಲ್ಲಿ ಸಣಕಲು ರೂಪದರ್ಶಿಯರಿಗೆ ನಿಷೇಧ
ಪ್ಯಾರಿಸ್,ಮೇ7: ಫ್ರಾನ್ಸ್‌ನಲ್ಲಿ ಆರೋಗ್ಯವಂತರಲ್ಲದ ತೀರ ಸಣಕಲ ದೇಹದ ರೂಪದರ್ಶಿಯರಿಗೆ ನಿಷೇಧ ಹೇರುವ ಕಾನೂನು ಜಾರಿಗೆ ಬಂದಿದೆ. ಸೌಂದರ್ಯದ ನೆಪದಲ್ಲಿ ರೂಪದರ್ಶಿಯರು ಶರೀರವನ್ನು ಸ್ಲಿಂ ಮಾಡಿಸುವ ನೆಪದಲ್ಲಿ ದೇಹಾರೋಗ್ಯವನ್ನು ಕೆಡಿಸುತ್ತಿರುವುದನ್ನು ಗಮನಿಸಿ ಸರಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ.
ಇನ್ನುಮುಂದೆ ಕೆಲಸಕ್ಕೆ ಸೇರುವ ಮೊದಲು ತಮ್ಮ ಆರೋಗ್ಯವನ್ನು ಸಾಬೀತುಪಡಿಸುವ ಸರ್ಟಿಫಿಕೇಟನ್ನು ರೂಪದರ್ಶಿಯರು ನೀಡಬೇಕಾದೆ. ಇದರಲ್ಲಿ ಎತ್ತರಕ್ಕೆ ಸಹಜವಾದ ಭಾರವನ್ನು ರೂಪದರ್ಶಿಗಳು ಹೊಂದಿದ್ದಾರೆಯೇ ಎಂದು ವಿಶೇಷವಾಗಿ ನಮೂದಿಸಿರಬೇಕು. ಆಹಾರ ಸೇವಿಸುವ ಮತ್ತುಫ್ಯಾಶನ್ ರಂಗದ ತಪ್ಪಾದ ರೂಢಿಗಳನ್ನು ನಿವಾರಿಸುವ ಉದ್ದೇಶದಿಂದ ಕಾನೂನು ಜಾರಿಗೆ ತರಲಾಗಿದೆ ಎಂದು ಫ್ರಾನ್ಸ್‌ನ ಆರೋಗ್ಯಸಚಿವಾಲಯ ತಿಳಿಸಿದೆ.
ಅಕ್ಟೋಬರ್ ಒಂದರಿಂದ ಫೋಟೊಶಾಪ್‌ನಲ್ಲಿ ಬದಲಾವಣೆ ಮಾಡಿದ ಫೋಟೊಗಳ ಮಾಹಿತಿಯನ್ನು ಕೂಡಾ ನೀಡಬೇಕೆಂದು ಕಾನೂನಿನಲ್ಲಿ ವ್ಯಕ್ತಪಡಿಸಲಾಗಿದೆ.ಕಾನೂನು ಉಲ್ಲಂಘಿಸುವವರಿಗೆ ಆರು ತಿಂಗಳು ಜೈಲು, 75,000 ಯುರೋ ದಂಡ(ಸುಮಾರು 53 ಲಕ್ಷರೂಪಾಯಿ) ವಿಧಿಸಲಾಗುವುದು ಎಂದು ಕಾನೂನಿನಲ್ಲಿದೆ.