ಬಾಂಬ್‌ಗೆ ‘ತಾಯಿ’ ಹೆಸರು ಬಳಸಬಾರದು: ಪೋಪ್ ಫ್ರಾನ್ಸಿಸ್
Update: 2017-05-07 21:33 IST
ಮಿಲಾನ್ (ಇಟಲಿ), ಮೇ 7: ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಪ್ರಯೋಗಿಸಿದ ಅತ್ಯಂತ ದೊಡ್ಡ ಪರಮಾಣೇತರ ಬಾಂಬ್‌ಗೆ ‘ಎಲ್ಲ ಬಾಂಬ್‌ಗಳ ತಾಯಿ’ ಎಂದು ಹೆಸರಿಟ್ಟಿರುವುದಕ್ಕೆ ಪೋಪ್ ಫ್ರಾನ್ಸಿಸ್ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಾರಕ ಶಸ್ತ್ರವೊಂದಕ್ಕೆ ಹೆಸರಿಡಲು ‘ತಾಯಿ’ ಪದವನ್ನು ಬಳಸಬಾರದು ಎಂದು ಅವರು ಹೇಳಿದ್ದಾರೆ.
ಇಲ್ಲಿ ಶನಿವಾರ ವಿದ್ಯಾರ್ಥಿಗಳ ಸಭೆಯೊಂದರಲ್ಲಿ ಮಾತನಾಡಿದ ಪೋಪ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.