ಅಖಿಲೇಶ್‌ರನ್ನು ಮುಖ್ಯಮಂತ್ರಿಮಾಡಿದ್ದು ನನ್ನ ಬಹುದೊಡ್ಡ ತಪ್ಪು: ಮುಲಾಯಂಸಿಂಗ್
ಲಕ್ನೊ,ಮೇ 8: ತನ್ನಜೀವನದಲ್ಲಿ ಸಂಭವಿಸಿದ ಬಹು ದೊಡ್ಡ ತಪ್ಪು ಪುತ್ರ ಅಖಿಲೇಶ್ ಯಾದವ್‌ರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಎಂದು ಸಮಾಜವಾದಿ ಪಕ್ಷದ ಸ್ಥಾಪಕ ನಾಯಕ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. ಚುನಾವಣಾ ಸೋಲಿಗೆ ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮಾತ್ರ ಕಾರಣ. ಅಲ್ಲದೆ ಇದು ಜನರ ಸೋಲಲ್ಲ ಎಂದು ಕರ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಲಾಯಂ ಸಿಂಗ್ ಹೇಳಿದರು.
ಕಾಂಗ್ರೆಸ್-ಎಸ್ಪಿ ಮೈತ್ರಿ ಸಮಾಜವಾದಿ ಪಕ್ಷವನ್ನು ಇಂದು ಈ ಸ್ಥಿತಿಗೆ ತಲುಪಲು ಕಾರಣವಾಗಿದೆ. ತಾನೇ ಮುಖ್ಯಮಂತ್ರಿ ಅಗಿದ್ದರೆ ಈರೀತಿಆಗುತ್ತಿರಲಿಲ್ಲ ಎಂದು ಮುಲಾಯಂ ಸಿಂಗ್ ಹೇಳಿದರು. ಅಖಿಲೇಶ್‌ನೊಡನೆ ಕಾಂಗ್ರೆಸಿನೊಂದಿಗೆ ಮೈತ್ರಿ ಬೇಡ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಅಖಿಲೇಶ್ ಕಿವಿಗೊಡಲಿಲ್ಲ. ಇದರ ಹಿಂದೆ ಕೆಲಸಮಾಡಿದವಿಲನ್ ಯಾರೆಂದು ಎಲ್ಲರಿಗೂ ಗೊತ್ತಿದೆ. ಅದನ್ನು ಜನರು ಅರಿತಿದ್ದಾರೆಎಂದು ಮುಲಾಯಂ ಹೇಳಿದರು. ಕರ್‌ಹಾಲ್‌ನ ಜನೂಷಾದಲ್ಲಿ ಧರ್ಮೇಂದ್ರಯಾದವ್‌ರ ಪ್ರತಿಮೆ ಅನಾವರಣ ಮಾಡಿ ಮುಲಾಯಂ ಮಾತಾಡುತ್ತಿದ್ದರು.
ಸಮಾಜವಾದಿ ಪಕ್ಷದ ಭವಿಷ್ಯ ಯುವಕರ ಕೈಯಲ್ಲಿದೆ. ಹಿಂದಿಗಿಂತ ಹೆಚ್ಚು ಶಕ್ತಿಯೊಂದಿಗೆನಾವು ಮರಳಲಿದ್ದೇವೆ. ಸ್ವಂತ ತಂದೆಯೊಂದಿಗೆ ಮಿತ್ರತ್ವವನ್ನು ಹೊಂದಲು ಸಾಧ್ಯವಾಗದ ಒಬ್ಬನಿಗೆ ಯಾರೊಂದಿಗೂ ಮಿತ್ರತ್ವವನ್ನು ಬೆಳೆಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಮಾಡಿದ ಆರೋಪಕ್ಕೆ ಉತ್ತರಿಸಲು ಅಖಿಲೇಶ್‌ರಿಂದಸಾಧ್ಯವಾಗಿಲ್ಲ ಎಂದು ಮುಲಾಯಂ ಟೀಕಿಸಿದರು.