×
Ad

ಪಾಕ್ ವ್ಯಕ್ತಿಯ ಜೊತೆ ಬಲವಂತದ ಮದುವೆ : ಭಾರತಕ್ಕೆ ಕಳುಹಿಸಲು ಭಾರತೀಯ ಮಹಿಳೆಯ ಪಟ್ಟು

Update: 2017-05-08 20:54 IST

ಇಸ್ಲಾಮಾಬಾದ್, ಮೇ 8: ತನ್ನನ್ನು ಬಂದೂಕು ತೋರಿಸಿ ಬಲವಂತವಾಗಿ ಪಾಕಿಸ್ತಾನಿ ವ್ಯಕ್ತಿಯ ಜೊತೆಗೆ ಮದುವೆ ಮಾಡಲಾಗಿದೆ ಎಂಬುದಾಗಿ ಭಾರತೀಯ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಆರೋಪಿಸಿದ್ದಾರೆ.

ತನ್ನನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸುವವರೆಗೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಹೊರಗೆ ಹೋಗುವುದಿಲ್ಲ ಎಂದು ಅವರು ಸೋಮವಾರ ಹೇಳಿದರು.

‘‘ನಾನು ನನ್ನ ಸ್ವಂತ ಇಚ್ಛೆಯಿಂದ ತಾಯ್ನೆಲಕ್ಕೆ ಹೋಗಬಯಸುತ್ತೇನೆ’’ ಎಂದು ಉಝ್ಮೆ ಎಂಬುದಾಗಿ ತನ್ನ ಹೆಸರು ಹೇಳಿಕೊಂಡ ಮಹಿಳೆ ನ್ಯಾಯಾಂಗ ಮ್ಯಾಜಿಸ್ಟ್ರೇಟರ ಕಚೇರಿಯಲ್ಲಿ ಅರ್ಜಿಯೊಂದನ್ನು ದಾಖಲಿಸಿದ್ದಾರೆ.

ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿಪಡಿಸಿದೆ. ಹೊಸದಿಲ್ಲಿ ನಿವಾಸಿ ಮಹಿಳೆಗೆ ಮಲೇಶ್ಯದಲ್ಲಿ ತಾಹಿರ್ ಖಾನ್ ಎಂಬಾತನ ಪರಿಚಯವಾಗಿತ್ತು.

ಪಾಕಿಸ್ತಾನದ ವೀಸಾ ಪಡೆದು ಅಲ್ಲಿಗೆ ಹೋದ ಬಳಿಕ ತಾಹಿರ್ ತನ್ನನ್ನು ವಿಚಿತ್ರ ಮನೆಗೆ ಹಾಗೂ ವಿಚಿತ್ರ ಜನರಿದ್ದಲ್ಲಿಗೆ ಕರೆದೊಯ್ದನು. ಅಲ್ಲಿ ತನ್ನ ಮೇಲೆ ಲೈಂಗಿಕ ಹಾಗೂ ದೈಹಿಕ ಹಲ್ಲೆ ನಡೆಸಲಾಯಿತು ಹಾಗೂ ಬಂದೂಕು ತೋರಿಸಿ ನಿಖಾ ನಾಮಕ್ಕೆ ಸಹಿ ಹಾಕಿಸಿಕೊಂಡರು ಎಂಬುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಉಝ್ಮೆ ವಿವರಿಸಿದ್ದಾರೆ.

ತಾಹಿರ್‌ಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News