ನನಗೇಕೆ ಗಿಫ್ಟ್ ಕೊಡುತ್ತೀಯಾ ?
Update: 2017-05-08 23:36 IST
ಬೆಂಗಳೂರು, ಮೇ 8: ಕೆಪಿಸಿಸಿ ಕಚೇರಿಗೆ ಇಂದು ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೆಪಿಸಿಸಿ ನೂತನ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ಅವರು ತಮಗೆ ಗಿಫ್ಟ್ ಕೊಡಲು ಬಂದ ಕಾಂಗ್ರೆಸ್ ಮುಖಂಡನಿಗೆ ಇಂಗ್ಲಿಷ್‌ನಲ್ಲೇ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಪಡೆಯುತ್ತಿದ್ದ ವೇಳೆ ಕಾಂಗ್ರೆಸ್ ನ ಮುಖಂಡರೊಬ್ಬರು ವೇಣುಗೋಪಾಲ್ ಅವರಿಗೆ ಉಡುಗೊರೆ ನೀಡಲು ಮುಂದಾದರು ಎನ್ನಲಾಗಿದೆ. ಆಗ ಸಿಟ್ಟಾದ ವೇಣುಗೋಪಾಲ್ ನನಗೇಕೆ ಗಿಫ್ಟ್ ಕೊಡುತ್ತೀಯಾ, ನಿನ್ನಲ್ಲಿ ಹಣ ಜಾಸ್ತಿ ಇದ್ದರೆ ಬಡವರಿಗೆ ಹಂಚು ಅಥವಾ ದೇವರ ಹುಂಡಿಗೆ ಹಾಕು ” ಎಂದು ಗದರಿದರು ತಿಳಿದು ಬಂದಿದೆ.