×
Ad

ಇಂಧನ ಆಯೋಗಕ್ಕೆ ಭಾರತೀಯನ ನೇಮಕ

Update: 2017-05-09 20:26 IST

ವಾಶಿಂಗ್ಟನ್, ಮೇ 9: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಅಮೆರಿಕನ್ ನೀಲ್ ಚಟರ್ಜಿಯನ್ನು ಫೆಡರಲ್ ಇಂಧನ ನಿಯಂತ್ರಣ ಆಯೋಗದ ಸದಸ್ಯರಾಗಿ ನೇಮಕ ಮಾಡಿದ್ದಾರೆ.

ಕೆಂಟಕಿ ರಾಜ್ಯದ 40 ವರ್ಷದ ಚಟರ್ಜಿಯ ಅಧಿಕಾರಾವಧಿ 2021 ಜೂನ್ 30ರವರೆಗಿರುತ್ತದೆ.

ಅಮೆರಿಕದ ಸೆನೆಟ್ ಮೆಜಾರಿಟಿ ನಾಯಕ ಮಿಚ್ ಮೆಕನೆಲ್‌ಗೆ ಇಂಧನ ನೀತಿ ಸಲಹಾಕಾರರಾಗಿರುವ ಚಟರ್ಜಿ, ಮಹತ್ವದ ಇಂಧನ, ಹೆದ್ದಾರಿ ಮತ್ತು ಕೃಷಿ ಮಸೂದೆಗಳ ವಿನ್ಯಾಸದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News