×
Ad

ಮೋದಿ ಲಂಕಾ ಭೇಟಿ: ಕಣಜದ ಹುಳಗಳ ಗೂಡು ತೆರವು

Update: 2017-05-09 20:45 IST

ಕೊಲಂಬೊ, ಮೇ 9: ಪ್ರಧಾನಿ ನರೇಂದ್ರ ಮೋದಿ ಈ ವಾರ ಭೇಟಿ ನೀಡಲಿರುವ ಶ್ರೀಲಂಕಾದ ಗುಡ್ಡಗಾಡು ಪ್ರದೇಶ ಡಿಕೊಯದಲ್ಲಿರುವ ಕಣಜದ ಹುಳಗಳ ಗೂಡುಗಳನ್ನು ತೆಗೆಸುವ ಕೆಲಸವನ್ನು ಅಲ್ಲಿನ ಅಧಿಕಾರಿಗಳು ಆರಂಭಿಸಿದ್ದಾರೆ.

ಈ ಕೀಟಗಳಿಂದ ‘ದಾಳಿ’ಯಾಗಬಹುದಾದ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಧಾನಿ ಮೋದಿಯ ರಕ್ಷಣಾ ಜವಾಬ್ದಾರಿಯನ್ನು ಹೊತ್ತಿರುವ ಭದ್ರತಾ ಘಟಕಗಳು ಕಣಜದ ಹುಳಗಳ ಗೂಡುಗಳನ್ನು ತೆರವುಗೊಳಿಸುವ ಕಾರ್ಯದ ಉಸ್ತುವಾರಿಯನ್ನು ಹೊತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News