×
Ad

ಜೂ.7ಕ್ಕೆ ಭಾರತ-ಲೆಬನಾನ್ ಸೌಹಾದರ್ ಫುಟ್ಬಾಲ್ ಪಂದ್ಯ

Update: 2017-05-09 21:52 IST

ಮುಂಬೈ, ಮೇ 9: ಉಪನಗರ ಅಂಧೇರಿಯಲ್ಲಿ ಜೂ.7 ರಂದು ಭಾರತ ಹಾಗೂ ಲೆಬನಾನ್ ನಡುವಿನ ಸೌಹಾರ್ದ ಫುಟ್ಬಾಲ್ ಪಂದ್ಯದ ನಡೆಯಲಿರುವುದಾಗಿ ವೆಸ್ಟರ್ನ್ ಇಂಡಿಯಾ ಫುಟ್ಬಾಲ್ ಅಸೋಸಿಯೇಶನ್ ಮೂಲಗಳು ದೃಢಪಡಿಸಿವೆ.

ಮುಂದಿನ ತಿಂಗಳು ಭಾರತ ಹಾಗೂ ಲೆಬನಾನ್ ನಡುವೆ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ನಡೆಯಲಿದೆ.

ಕಳೆದ ವರ್ಷದ ಸೆಪ್ಟಂಬರ್ 4 ರಂದು ಅಂಧೇರಿಯಲ್ಲಿ ಆರು ದಶಕಗಳ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯವೊಂದು ನಡೆದಿತ್ತು. ಭಾರತ ತಂಡ ಪೊರ್ಟೊ ರಿಕೋ ವಿರುದ್ಧ ಇಲ್ಲಿ ಪಂದ್ಯವನ್ನು ಆಡಿದ್ದು, 4-1 ರಿಂದ ಪಂದ್ಯ ಜಯಿಸಿತ್ತು.

ಲೆಬನಾನ್ ವಿರುದ್ಧದ ಸೌಹಾರ್ದ ಪಂದ್ಯಕ್ಕಿಂತ ಮೊದಲು ಭಾರತದ ಫುಟ್ಬಾಲ್ ತಂಡ ಅಂಧೇರಿ ಕಾಂಪ್ಲೆಕ್ಸ್‌ನಲ್ಲಿ ಮೇ 20 ರಮದು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಭಾರತ ತಂಡ ಲೆಬನಾನ್ ತಂಡದ ವಿರುದ್ಧ ಪಂದ್ಯದ ಬಳಿಕ ಜೂ.13 ರಂದು ಬೆಂಗಳೂರಿನಲ್ಲಿ ಕಿರ್ಜಿಸ್ತಾನದ ವಿರುದ್ಧ ಎಎಫ್‌ಸಿ ಏಷ್ಯಾಕಪ್-2019ರ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News