ಬಿಜೆಪಿ ನಾಯಕನ ಮನೆಗೆ ಪೆಟ್ರೋಲ್ ಬಾಂಬ್ ಎಸೆತ
Update: 2017-05-09 23:28 IST
ಶಿವಗಂಗಾ(ತ.ನಾ),ಮೇ 9: ಜಿಲ್ಲೆಯ ದೇವಕೊಟ್ಟೈನಲ್ಲಿ ಮಂಗಳವಾರ ಬೆಳಗಿನ ಜಾವ ಅಪರಿಚಿತ ವ್ಯಕ್ತಿಗಳು ಬಿಜೆಪಿ ನಾಯಕ ಮುತ್ತುರಾಮನ್ ಅವರ ಮನೆಗೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಮನೆಯಲ್ಲಿದ್ದವರು ಗಾಯಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಕೆಲವು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದರು. ಮುತ್ತುರಾಮನ್ ಅವರು ಬಿಜೆಪಿಯ ತಮಿಳು ಅಭಿವೃದ್ಧಿ ಘಟಕದ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.