ತರಗತಿಯಲ್ಲಿ ಬಾಲಕಿಯ ಶಿರವಸ್ತ್ರ ಹರಿದ ಶಿಕ್ಷಕ

Update: 2017-05-10 14:19 GMT

 ನ್ಯೂಯಾರ್ಕ್, ಮೇ 10: ತರಗತಿಯಲ್ಲಿ ‘ದುರ್ವರ್ತನೆ ತೋರಿಸಿರುವುದಕ್ಕಾಗಿ’ 8 ವರ್ಷದ ಬಾಲಕಿಯ ಹಿಜಾಬನ್ನು (ಶಿರವಸ್ತ್ರ) ಶಿಕ್ಷಕನೋರ್ವ ಹರಿದು ಹಾಕಿದ ಘಟನೆಯೊಂದು ಅಮೆರಿಕದಿಂದ ವರದಿಯಾಗಿದೆ.

ಘಟನೆಯ ಬಳಿಕ ಬ್ರಾಂಕ್ಸ್ ರಾಜ್ಯದ ಬೆನಿಂಗ್ಟನ್ ಶಾಲೆಯ ಶಿಕ್ಷಕ ಒೆನೆಟೆಗ ಇಡಾ (31) ಎಂಬವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಬಾಲಕಿಯು ತರಗತಿಯಲ್ಲಿ ಕೆಟ್ಟದಾಗಿ ವರ್ತಿಸುತ್ತಿದ್ದಾಳೆ, ಅವಳು ಅನುಮತಿಯಿಲ್ಲದೆ ಶಿಕ್ಷಕರ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾಳೆ ಎನ್ನುವುದು ಶಿಕ್ಷಕನ ಆರೋಪ. ಕುರ್ಚಿಯಿಂದ ಬಾಲಕಿ ಏಳುವಂತೆ ಮಾಡಲು ಆಕೆಯ ಕೈಯನ್ನು ಶಿಕ್ಷಕ ತಡವಿದ್ದಾರೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಅದನ್ನು ಬಾಲಕಿ ನಿರ್ಲಕ್ಷಿಸಿದಾಗ, ಆಕೆಯ ತಲೆವಸ್ತ್ರವನ್ನು ತೆಗೆಯುವುದಾಗಿ ಶಿಕ್ಷಕರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಬಳಿಕ, ಬಾಲಕಿಯ ತಲೆಯಿಂದ ಹಿಜಾಬನ್ನು ಎಳೆದನು. ಇದರಿಂದ ಆಕೆಯ ಬಲಗಣ್ಣಿಗೆ ಗಾಯವಾಯಿತು.

‘‘ಶಿಕ್ಷಕನನ್ನು ತಕ್ಷಣ ಶಾಲೆಯಿಂದ ಅಮಾನತುಗೊಳಿಸಲಾಗಿದೆ ಹಾಗೂ ಆತನನ್ನು ಕೆಲಸದಿಂದ ತೆರವುಗೊಳಿಸಲಾಗಿದೆ’’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News