×
Ad

ಈಗ ಅತ್ಯಂತ ಭಾರದ ಪುರುಷನಿಗೆ ಶಸ್ತ್ರಚಿಕಿತ್ಸೆ

Update: 2017-05-10 22:02 IST

ಮೆಕ್ಸಿಕೊ ಸಿಟಿ, ಮೇ 10: ಜಗತ್ತಿನ ಅತ್ಯಂತ ಭಾರದ ಪುರುಷನಿಗೆ ಮೆಕ್ಸಿಕೊದ ಗ್ವಡಲಜರ ಎಂಬ ನಗರದಲ್ಲಿ ತೂಕ ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಅವರ ವೈದ್ಯರು ಹೇಳಿದ್ದಾರೆ.

ಮೆಕ್ಸಿಕೊ ನಿವಾಸಿ ಜುವಾನ್ ಪೆಡ್ರೊ ಫ್ರಾಂಕೊ ಒಂದು ಹಂತದಲ್ಲಿ ಬರೋಬ್ಬರಿ 600 ಕೆಜಿ ತೂಗುತ್ತಿದ್ದರು.
ಅವರ ತೂಕವನ್ನು ಅರ್ಧದಷ್ಟು ಕಡಿಮೆ ಮಾಡುವ ಉದ್ದೇಶದಿಂದ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ಮಾಡಲಾಗಿದೆ. ಇದರ ಬಳಿಕ ಇನ್ನೊಂದು ಶಸ್ತ್ರಚಿಕಿತ್ಸೆಯನ್ನು ನಡೆಸಬಹುದಾಗಿದೆ ಎಂದು ಅವರ ವೈದ್ಯ ಜೋಸ್ ಕ್ಯಾಸ್ಟನೇಡ ಮಂಗಳವಾರ ತಿಳಿಸಿದರು.

ಹಲವು ವರ್ಷಗಳನ್ನು ಹಾಸಿಗೆಯಲ್ಲೇ ಕಳೆದಿರುವ ಫ್ರಾಂಕೊಗೆ ನವೆಂಬರ್‌ನಲ್ಲಿ ಎರಡನೆ ಶಸ್ತ್ರಚಿಕಿತ್ಸೆಯನ್ನು ನಡೆಸುವ ಸಾಧ್ಯತೆಯಿದೆ. ಆಗ ಅವರ ಹೊಟ್ಟೆಯ ಗಾತ್ರವನ್ನು ಕಿರಿದುಗೊಳಿಸಲಾಗುವುದು ಹಾಗೂ ಅವರ ಕರುಳುಗಳಿಗೆ ಮಾರ್ಪಾಡು ತರಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News