ಚೀನಾದಲ್ಲಿ ನಡುಗಿದ ಭೂಮಿ: 8 ಮಂದಿ ಮೃತ್ಯು
Update: 2017-05-11 11:36 IST
ಬೀಜಿಂಗ್, ಮೇ 11: ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿದ್ದು, 8 ಮಂದಿ ಮೃತಪಟ್ಟು 11ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
5.5 ತೀವ್ರತೆಯ ಭೂಕಂಪನದಿಂದ 8 ಮಂದಿ ಮೃತಪಟ್ಟಿರುವುದು ಧೃಡಪಟ್ಟಿದೆ. ಪಮೀರ್ ಪ್ಲಾಟೂ ನ ಆಗ್ನೇಯ ಭಾಗದಲ್ಲಿ ಭೂಕಂಪನದ ಕೇಂದ್ರಭಾಗ ಎನ್ನಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ತಜಕಿಸ್ತಾನದ ಗಡಿಭಾಗದ 1250 ಕಿ.ಮೀ. ದೂರದಲ್ಲಿ ಈ ಪ್ರದೇಶವಿದೆ.