ಡರ್ಬನ್: ಶೌಚಾಲಯಕ್ಕೂ ಶುಲ್ಕ ವಿಧಿಸಿದ ಭಾರತೀಯ ಮೂಲದ ರೆಸ್ಟೋರೆಂಟ್‌ ಮಾಲಕ

Update: 2017-05-11 08:52 GMT

ಜೊಹಾನ್ಸ್‌ಬರ್ಗ್,ಮೇ 11 : ಡರ್ಬನ್ ನಗರದಲ್ಲಿ ಫಾಸ್ಟ್ ಫುಡ್ ರೆಸ್ಟೋರೆಂಟ್‌ ಒಂದನ್ನು ನಡೆಸುತ್ತಿರುವ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನಾಗರಿಕರೊಬ್ಬರು ತಮ್ಮ ಹೋಟೆಲಿನಲ್ಲಿರುವ ಶೌಚಾಲಯ ಉಪಯೋಗಿಸುವವರಿಂದ 20 ರ್ಯಾಂಡ್, ಅಂದಾಜು ರೂ.95 ಶುಲ್ಕ ಸಂಗ್ರಹಿಸಿ ವಿವಾದಕ್ಕೀಡಾಗಿದ್ದಾರೆ.

ಅಲ್ಲಿ ಹತ್ತಿರದಲ್ಲಿರುವ ಬೀಚ್ ಗೆ ಆಗಮಿಸುವ ನೂರಾರು ಮಂದಿ ತಮ್ಮ ರೆಸ್ಟೋರೆಂಟ್‌ ನಲ್ಲಿ ಸಣ್ಣ ಖರೀದಿ ಮಾಡಿ ನಂತರ ಶೌಚಾಲಯ ಉಪಯೋಗಿಸುವುದರಿಂದ ತಮಗಾಗುತ್ತಿರುವ ನಷ್ಟವನ್ನು ಕಡಿಮೆಗೊಳಿಸುವ ಸಲುವಾಗಿ ತಮ್ಮ ಗ್ರಾಹಕರಿಗೆ ಮಾತ್ರ ಈ ಶೌಚಾಲಯ ಮೀಸಲಿರಿಸಬೇಕೆಂದ ಉದ್ದೇಶದಿಂದ ಜಾಲಿ ಗ್ರಬ್ಬರ್ ಎಂಬ ಈ ರೆಸ್ಟೋರೆಂಟ್‌ ಮಾಲಕ ಜುನೈದ್ ಮೂಲ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ.

ಈ ಹೋಟೆಲಿಗೆ ಭೇಟಿ ನೀಡಿದ ಗ್ರಾಹಕರಾದ ರೇಝಾ ಖಾನ್ ಎಂಬವರು ತಮ್ಮಿಂದ ಸಂಗ್ರಹಿಸಲಾದ 40 ರ್ಯಾಂಡ್ ( ರೂ .190 ) ಶುಲ್ಕ ರಶೀದಿಯನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಶೌಚಾಲಯ ಉಪಯೋಗಿಸಲು ಇಷ್ಟೊಂದು ಹಣವನ್ನು ನಾನು ಇದೇ ಮೊದಲ ಬಾರಿ ನೀಡಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಜಾಲಿ ಗ್ರಬ್ಬರ್ ರೆಸ್ಟೋರೆಂಟ್‌ನಲ್ಲಿ ಹೊರಗಡೆ ಹೀಗೆ ಬರೆಯಲಾಗಿದೆ.

‘‘ಟಾಯ್ಲೆಟ್ ಗಳು ಜಾಲ್ಲಿ ಗ್ರಬ್ಬರ್ ಗ್ರಾಹಕರಿಗೆ ಮಾತ್ರ. ಪಾನೀಯ ಖರೀದಿಸಿದ ಮಾತ್ರಕ್ಕೆ ನೀವು ಈ ಸೌಲಭ್ಯವನ್ನು ಉಪಯೋಗಿಸುವ ಹಾಗಿಲ್ಲ. ಆದುದರಿಂದ ಈ ಸೌಲಭ್ಯವನ್ನು ಅನುಮತಿಯಿಲ್ಲದೆ ಉಪಯೋಗಿಸುವುದು ಕಳ್ಳತನ, ಹರಾಮ್ ಗೆ ಸಮ.

‘‘ಪ್ರತಿಯೊಬ್ಬ ವ್ಯಕ್ತಿ ಸರ್ವಿಸ್ ಚಾರ್ಜ್ 20 ರ್ಯಾಂಡ್ ಕೌಂಟರಿನಲ್ಲಿ ಪಾವತಿಸಬೇಕು, ಇದು ಸಾರ್ವಜನಿಕ ಶೌಚಾಲಯವಲ್ಲ.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News