×
Ad

ಉ.ಪ್ರದೇಶ: ಬಿಜೆಪಿಯಿಂದ 87 ಮಂದಿ ಉಚ್ಚಾಟನೆ

Update: 2017-05-11 23:53 IST

ಲಕ್ನೊ, ಮೇ 11: ಪ್ರಮುಖ ನಾಯಕರು ಮತ್ತು ಕಾರ್ಯ ಕರ್ತರೂ ಸೇರಿದಂತೆ 87 ಮಂದಿಯನ್ನು ಪಕ್ಷ ವಿರೋಧಿ ಕೃತ್ಯದಲ್ಲಿ ತೊಡಗಿದ್ದ ಕಾರಣದಿಂದ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಘಟಕ ತಿಳಿಸಿದೆ. ಬಿಜೆಪಿಯ ರಾಜ್ಯಘಟಕದ ಶಿಸ್ತು ಸಮಿತಿ ನಡೆಸಿದ ತನಿಖೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಉಚ್ಚಾಟಿತರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಬಂಡೆದ್ದು ಸ್ಪರ್ಧಿಸಿದ್ದರು ಅಥವಾ ಪಕ್ಷದ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ್ದರು ಎಂದು ಉ.ಪ್ರದೇಶದ ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್ ಸೋಂಕರ್ ತಿಳಿಸಿದ್ದಾರೆ.

ಕಪಿಲ್ ದೇವ್ ಕೋರಿ, ವಿ.ಕೆ.ಸೈನಿ, ಇಂದರ್‌ದೇವ್ ಸಿಂಗ್, ಶಾಂತಿಸ್ವರೂಪ್ ಶರ್ಮ, ಚಂದ್ರಶೇಖರ್ ರಾವತ್, ಪ್ರತಿಭ ಸಿಂಗ್, ಮಹೇಶ್ ನಾರಾಯಣ್ ತಿವಾರಿ ಮುಂತಾದ ಪ್ರಮುಖ ನಾಯಕರೂ ಸೇರಿದ್ದಾರೆ. ಈ ಕ್ರಮಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೇಶವ್‌ಪ್ರಸಾದ್ ವೌರ್ಯ ಅಂಗೀಕಾರ ನೀಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News