×
Ad

ಮದುವೆ ಮೆರವಣಿಗೆಯಲ್ಲಿದ್ದ ವರ ಹೃದಯಾಘಾತಕ್ಕೆ ಬಲಿ

Update: 2017-05-12 15:43 IST

ಆನಂದ(ಗುಜರಾತ್),ಮೇ 12: ತನ್ನ ಮದುವೆ ಮೆರವಣಿಗೆಯಲ್ಲಿ ಖುಷಿಯಿಂದ ಸಾಗುತ್ತಿದ್ದ 25ರ ಹರೆಯದ ಮದುಮಗ ಹೃದಯಾಘಾತದಿಂದ ಸಾವನ್ನಪ್ಪಿದ ದುರಂತ ಘಟನೆ ಆನಂದ ಜಿಲ್ಲೆಯ ಬೋರ್ಸಾಡ್ ಪಟ್ಟಣದಲ್ಲಿ ನಡೆದಿದೆ.

 ಮಂಗಳವಾರ ತಡರಾತ್ರಿ ಮದುವೆ ಮೆರವಣಿಗೆ ವಧುವಿನ ಮನೆಗೆ ತೆರಳುತ್ತಿದ್ದು, ಎಲ್ಲರೂ ಖುಷಿಯ ಮೂಡ್‌ನಲ್ಲಿ ನರ್ತಿಸುತ್ತ ಸಾಗುತ್ತಿದ್ದರು. ಈ ವೇಳೆ ತನ್ನ ಸ್ನೇಹಿತನ ಹೆಗಲ ಮೇಲೆ ಕುಳಿತಿದ್ದ ಮದುಮಗ ಸಾಗರ್ ಸೋಳಂಕಿಗೆ ಏಕಾಏಕಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದ. ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದ.

ಆನಂದ ಜಿಲ್ಲೆಯ ರಣೋಲಿ ಗ್ರಾಮದ ನಿವಾಸಿ ಸಾಗರ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಈ ಘಟನೆ ವರ ಮತ್ತು ವಧುವಿನ ಕುಟುಂಬಗಳಿಗೆ ಭಾರೀ ಆಘಾತವನ್ನುಂಟು ಮಾಡಿದ್ದು, ಮದುವೆ ಸಂಭ್ರಮದ ಜಾಗದಲ್ಲಿ ಸೂತಕದ ವಾತಾವರಣ ಮನೆಮಾಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News