×
Ad

ಫ್ಲಿಪ್ ಕಾರ್ಟ್‌ನಲ್ಲಿ ಫೋನ್ ಆರ್ಡರ್ ಮಾಡಿದರೆ ಸಿಕ್ಕಿದ್ದು ಸಾಬೂನು!

Update: 2017-05-12 17:24 IST

ಪುಣೆ,ಮೇ 12: ಪ್ರಮುಖ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಫೋನ್‌ಗೆ ಆರ್ಡರ್ ಮಾಡಿ ಕಾದು ಕುಳಿತ ಮುಂಬೈ ವ್ಯಕ್ತಿಗೆ ಸಿಕ್ಕಿದ್ದು ಸಾಬೂನು!.ವಸಂತ್ ಕಾಂಬ್ಲೆ ಎಂಬವರು 14,900 ಮೌಲ್ಯದ ಸ್ಯಾಮ್ಸಂಗ್ ಮೊಬೈಲ್‌ಗೆ ಆರ್ಡರ್ ಮಾಡಿದ್ದರು. ಡೆಲಿವರಿ ಮಾಡಿ ಸ್ವಲ್ಪ ಸಮಯದ ಬಳಿಕ ತೆರೆದುನೋಡಿದಾಗ ಅವರು ಬೆಚ್ಚಿಬಿದ್ದರು. ಯಾಕೆಂದರೆ ಒಂದು ಸಾಬೂನು, ವಾಷಿಂಗ್ ಪೌಡರ್ ಪ್ಯಾಕೆಟ್‌ನಲ್ಲಿತ್ತು. ಅಷ್ಟರಲ್ಲಿ ಡೆಲಿವರಿ ಬಾಯ್ ಹೋಗಿಯಾಗಿತ್ತು.

 ಫ್ಲಿಪ್‌ಕಾರ್ಟ್‌ನಲ್ಲಿ ಎರಡು ಫೋನ್‌ಗಳಿಗೆ ಕಾಂಬ್ಲೆ ಆರ್ಡರ್ ಕೊಟ್ಟಿದ್ದರು. ನಂತರ ಒಂದು ಸಾಕೆಂದು 14,900ರೂಪಾಯಿ ಕೋಟ್ಟುಒಂದೇ ಫೋನನ್ನೆ ಅವರು ಡೆಲಿವರಿ ಬಾಯ್‌ನಿಂದ ಪಡೆದುಕೊಂಡಿದ್ದರು. ತಾನುಮೋಸಹೋಗಿದ್ದೇನೆಂದು ಅರಿತ ಬಳಿಕ ಇವರು ಫ್ಲಿಪ್ ಕಾರ್ಟ್‌ಗೆ ಫೋನ್ ಮಾಡಿ, ದೂರು ನೀಡಿದ್ದಾರೆ. ಆದರೆ ನಂತರ ಫೋನ್ ಮಾಡಿ ಎಂದು ಹೇಳಲಾಯಿತು. ನಂತರ ಫೋನ್ ಮಾಡಿದಾಗ ಫೋನ್ ತೆಗೆಯಲಿಲ್ಲ. ಕಾಂಬ್ಲೆ ಫ್ಲಿಪ್‌ಕಾರ್ಟ್ ಮತ್ತು ಡೆಲಿವರಿ ಮಾಡಿದ ಇ-ಕಾರ್ಟ್‌ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News